ಸಮಗ್ರ ನ್ಯೂಸ್: ಮದುವೆ ಮುಗಿಸಿಕೊಂಡು ವಾಪಾಸ್ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ವಾಹನವೊಂದು ಮರಕ್ಕೆ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ನಡೆದಿದೆ.


ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮದವರು ಮೈಸೂರಿನಲ್ಲಿದ್ದ ಮದುವೆ ಕಾರ್ಯಕ್ರಮ ಮುಗುಸಿಕೊಂಡು ಬೊಲೆರೋ ವಾಹನದಲ್ಲಿ ವಾಪಾಸ್ ತಮ್ಮೂರಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಅನೀಲ್, ಸಂತೋಷ್, ವಿನುತ್, ದಯಾನಂದ್, ರಾಜೇಶ್ ಹಾಗೂ ಬಾಬು ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.