ಸಮಗ್ರ ನ್ಯೂಸ್ ಡೆಸ್ಕ್: ಸಕ್ಕರೆ ಕಾಯಿಲೆ ಎಲ್ಲೆಲ್ಲೂ ಪ್ರವರ್ಧಮಾನಕ್ಕೆ ಬಂದಿರುವ ಶ್ರೀಮಂತ ಕಾಯಿಲೆ!. ಹೌದು, ಬರೀ ಶ್ರೀಮಂತರನ್ನು ಮಾತ್ರ ಕಾಡಿಸುತ್ತಿದ್ದ ಈ ಕಾಯಿಲೆ ಈಗೀಗ ಬಡವರತ್ತ ಕೂಡ ತನ್ನ ಚೂಪು ನೋಟ ಹರಿಸಿದೆ. ಆಹಾರದಲ್ಲಿ ಪಥ್ಯ ಮಾಡುತ್ತಾ ಸಿಹಿತಿಂಡಿ ಕಣ್ಣೆದುರೇ ಇದ್ದರೂ ತಿನ್ನಲಾಗದಂತಹ ಸ್ಥಿತಿ ಈ ಸಕ್ಕರೆ ಕಾಯಿಲೆ ಉಂಟು ಮಾಡುತ್ತದೆ. ಹಾಗಾದರೆ ಈ ಕೊಲ್ಲದೇ ಕೊಲ್ಲುವ ರೋಗವನ್ನು ಹತೋಟಿಯಲ್ಲಿಡುವುದು ಹೇಗೆ? ತಿಳಿಯೋಣ…
ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಸಹಕಾರಿ. ಸಸ್ಯಾಹಾರಿ ಮಧುಮೇಹಿಗಳಿಗೆ ಆಹಾರಗಳು ವೈವಿಧ್ಯಮಯವಾಗಿ ಇರುವುದಿಲ್ಲ. ಬರಿಯ ತರಕಾರಿಗಳಲ್ಲೇ ವಿವಿಧತೆಯನ್ನು ಮಾಡಿಕೊಂಡು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
ನೀವು ಒಬ್ಬ ಒಳ್ಳೆಯ ಪಾಕ ಪ್ರವೀಣರಾಗಿದ್ದರೆ ವಿಧ ವಿಧದ ತರಕಾರಿಗಳಿಂದ ಬೇರೆ ಬೇರೆ ಸ್ವಾದಿಷ್ಟ ಆಹಾರಗಳನ್ನು ಸವಿಯಬಹುದು. ಬರಿಯ ಸಪ್ಪೆ, ರುಚಿಯಿಲ್ಲದ ತಿಂಡಿ ಊಟವನ್ನು ನಿಮ್ಮ ಮಧ್ಯಾಹ್ನದೂಟಕ್ಕೆ ಕೊಂಡೊಯ್ಯುವುದರ ಬದಲಿಗೆ ರುಚಿಯಾದ ಈ ಡಿಶ್‌ಗಳನ್ನು ಟ್ರೈ ಮಾಡಿ. ಮಧುಮೇಹಿಗಳಿಗೆ ಅದರಲ್ಲೂ ಸಸ್ಯಾಹಾರಿಗಳಿಗೆ ಆಹಾರಕ್ಕಾಗಿ ಅನ್ವೇಷಣೆ ಮಾಡಲಾಗುವುದಿಲ್ಲ ಇರುವುದರಲ್ಲೇ ರುಚಿಯಾದ ಆಹಾರಗಳನ್ನು ತಯಾರಿಸಿ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು.
ಹಾಗಲಕಾಯಿ ಸುಕ್ಕಾ: ಇದೊಂದು ಸರಳ ಮತ್ತು ತ್ವರಿತವಾಗಿ ಮಾಡಲ್ಪಡುವ ಡಿಶ್ ಆಗಿದೆ. ಹಾಗಲಕಾಯಿಯ ಕಹಿ ಅಂಶವನ್ನು ತೆಗೆದು ಈ ರೆಸಿಪಿಯನ್ನು ಮಾಡಲಾಗುತ್ತದೆ. ಹಾಗಲಕಾಯಿಯನ್ನು ಉಪ್ಪಿನಲ್ಲಿ ನೆನೆಸಿಟ್ಟಾಗ ಅದರ ಕಹಿ ಮಾಯವಾಗುತ್ತದೆ ನಂತರ ಈರುಳ್ಳಿ ಮತ್ತು ತರಕಾರಿಗಳನ್ನು ಮಿಶ್ರ ಮಾಡಿಕೊಂಡು ರುಚಿಯಾದ ಸುಕ್ಕಾ ತಯಾರಿಸಬಹುದು.

ದಾಲ್ ಕಬೀಲಾ: ದಾಲ್ ಕಬೀಲಾ ಎಂದೇ ಹೆಸರುಳ್ಳ ಮಧುಮೇಹಿ ಸಸ್ಯಾಹಾರಿ ಡಿಶ್ ಇದಾಗಿದೆ. ಇದೊಂದು ಮುಘಲಯ್ ಸಿಸ್ವನ್ ಆಗಿದ್ದು ಮಧುಮೇಹಿಗಳನ್ನು ಲಕ್ಷ್ಯವಾಗಿಟ್ಟುಕೊಂಡು ಸಿದ್ದಪಡಿಸಲಾದ ದಾಲ್ ಆಗಿದೆ.

ಕುಂಬಳಕಾಯಿ ಸೂಪ್: ಕುಂಬಳಕಾಯಿ ಮಧುಮೇಹಿಗಳಿಗೆ ತುಂಬಾ ಉತ್ತಮವಾದುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮಧುಮೇಹಿಗಳ ಸಕ್ಕರೆ ಪ್ರಮಾಣವನ್ನು ಏರಿಸುವುದಿಲ್ಲ.

ಲಿಂಬೆ ಓಟ್ಸ್ ರೆಸಿಪಿ: ಲಿಂಬೆ ಓಟ್ಸ್ ಅನ್ನು ಬೆಳಗ್ಗಿನ ಸಮಯದಲ್ಲಿ ನೀವು ಸೇವಿಸುವುದು ದೇಹಕ್ಕೆ ಉತ್ತಮವಾದುದು.

ಸ್ಟಫ್ಡ್ ಹಾಗಲಕಾಯಿ: ಈ ಸ್ಟಫ್ಡ್ ಹಾಗಲಕಾಯಿಯನ್ನು 30 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಮಧುಮೇಹಿಗಳಿಗೆ ಉತ್ತಮವಾಗಿರುವ ಹಾಗಲಕಾಯಿಯ ಈ ರೆಸಿಪಿ ಆರೋಗ್ಯಕ್ಕೆ ಒಳ್ಳೆಯದು.

ಬಟಾಣಿ ಪನ್ನೀರ್ ಕರಿ: ಮಧುಮೇಹಿಗಳಿಗೆ ಆರೋಗ್ಯಕರವಾಗಿರುವ ಬಟಾಣಿ ಪನ್ನೀರ್ ಕರಿ ನೈಸರ್ಗಿಕವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಕುಂಬಳಕಾಯಿ ಶುಂಠಿ ಬ್ರೆಡ್: ನಿಮಗೆ ಬ್ರೆಡ್ ತಿನ್ನಬೇಕೆಂಬ ಬಯಕೆ ಆದಾಗಲೆಲ್ಲಾ ಈ ಆರೋಗ್ಯಕರ ಕುಂಬಳಕಾಯಿ ಬ್ರೆಡ್ ಸವಿಯಿರಿ. ಇದು ಸಕ್ಕರೆ ಕಾಯಿಲೆಗೆ ಉತ್ತಮ ಆಹಾರವಾಗಿದೆ.

ಚೀಸ್ ಕ್ಯಾಪ್ಸಿಕಂ ಪರಾಟ: ಕ್ಯಾಪ್ಸಿಕಂ ರಕ್ತದಲ್ಲಿನ ಸಕ್ಕರೆಯನ್ನು ಇದು ನಿಯಂತ್ರಣದಲ್ಲಿಡುವುದರಿಂದ ಮಧುಮೇಹಿಗಳಿಗೆ ಕ್ಯಾಪ್ಸಿಕಂ ಚೀಸ್ ಪರಾಟ ಉತ್ತಮವಾಗಿದೆ.

ಬದನೆ ಬರ್ತಾ: ಬದನೆ ಕೂಡ ಮಧುಮೇಹಿಗಳಿಗೆ ಉತ್ತಮ ನ್ಯೂಟ್ರಿಶಿಯನ್ ಆಹಾರವಾಗಿರುವುದರಿಂದ ಇದನ್ನು ನಿತ್ಯದ ಆಹಾರದಲ್ಲಿ ಬಳಸಬಹುದಾಗಿದೆ.

ಸೌತೆಕಾಯಿ ಚನ್ನಾ ದಾಲ್: ಇದೊಂದು ಆರೋಗ್ಯಕರ ಆಹಾರವಾಗಿದ್ದು ಮಧುಮೇಹಿಗಳಿಗೆ ಉತ್ತಮವಾಗಿದೆ.

ಹಾಗಲಕಾಯಿ ರಾಯಿತ: ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಅದನ್ನು ಸಿದ್ದಪಡಿಸಿದರೆ ರುಚಿಯಾಗಿರುತ್ತದೆ. ಇದನ್ನು ಮೊಸರಿನೊಂದಿಗೆ ಬೆರೆಸಿ ರಾಯಿತದಂತೆ ಮಾಡಿ ಸೇವಿಸಬಹುದು.

ಮೊಸರು ಬೆಂಡೆಕಾಯಿ ಮಸಾಲಾ: ಬೆಂಡೆಕಾಯಿ ಮಸಾಲಾವನ್ನು ಹೈದ್ರಾಬಾದ್ ವಿಧಾನದಲ್ಲಿ ತಯಾರಿಸಲು ಸಾಧ್ಯ. ಇದು ಕೂಡ ರುಚಿಯಾದ ಒಂದು ಆಹಾರವಾಗಿದೆ.

ಮುಳ್ಳು ಸೌತೆ ಸಲಾಡ್: ನಿರ್ಜಲೀಕರಣದ ವಿರುದ್ಧ ಹೋರಾಡುವ ಉತ್ತಮ ಗುಣ ಮುಳ್ಳು ಸೌತೆಗಿದೆ. ಇದು ದೇಹವನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಮುಳ್ಳು ಸೌತೆ ಚೀಸ್ ಸ್ಯಾಂಡ್‌ವಿಚ್: ಇದೊಂದು ಸರಳ ಮತ್ತು ತ್ವರಿತವಾಗಿ ಮಾಡುವಂತಹ ಪಾಕವಾಗಿದೆ. ಇದು ನ್ಯೂಟ್ರಿಶಿಯನ್, ಪೋಷಕಾಂಶ ಭರಿತವಾಗಿದ್ದು ಮಧುಮೇಹಿಗಳಿಗೆ ರುಚಿಯಾದ ಪಥ್ಯಾಹಾರವಾಗಿದೆ.
