ಸಮಗ್ರ ನ್ಯೂಸ್: ಕಾಲೇಜಿನ ಪ್ರಾಧ್ಯಾಪಕಿಯೊರ್ವರ ಬಗ್ಗೆ ಕೀಳುಮಟ್ಟದ ಭಾಷೆ ಹಾಗೂ ಮಾನಹಾನಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜ್ ನ ಸಂಚಾಲಕ ಮತ್ತು ಇಬ್ಬರು ಪ್ರಾಧ್ಯಾಪಕ ರನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ.
ಬಂಟ್ವಾಳದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕರ ನೇಮಕಾತಿಯಿಂದ ಗಲಾಟೆ ನಡೆದು ಮಹಿಳಾ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿ ಪತ್ರವನ್ನು ತಯಾರಿಸಿ ಸಹೋದ್ಯೋಗಿ ಪ್ರಧ್ಯಾಪಕರಿಗೆ, ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವಬೆದರಿಕೆ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಅಧ್ಯಾಪಕಿ ನೀಡಿದ ದೂರಿನ ಪ್ರಕರಣ ಮಂಗಳೂರಿನ ಮಹಿಳಾ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಶಾಲಾ ಸಂಚಾಲಕ ಮತ್ತು ಪ್ರಾಧ್ಯಾಪಕರಾಗಿದ್ದರು. ಪೊಸ್ಟ್ ಕಾರ್ಡ್ ಹಾಗೂ ಭಾವ ಚಿತ್ರದೊಂದಿಗೆ ರಸ್ತೆ ಬದಿ, ಬಸ್ ಸ್ಟಾಂಡ್,ಸಾರ್ವಜನಿಕ ಶೌಚಾಲಯದಲ್ಲಿ ಅಂಟಿಸಿ ಇಡುತ್ತಿದ್ದು, ಇದನ್ನ ನೋಡಿ ಸಾರ್ವಜನಿಕರು ಕರೆಗಳ ಮೂಲಕ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ಇನ್ನು ತನಿಖೆ ಮುಂದುವರೆದಿದೆ.