ಮಂಗಳೂರು: ಟಿಪ್ಪರ್ ಡಿಕ್ಕಿ ಹೊಡೆದು ಬಾಲಕ ದುರ್ಮರಣ

ಸಮಗ್ರ ನ್ಯೂಸ್: ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಮಂಗಳೂರು ನಗರದ ಬಜಾಲ್ ಕಟ್ಟೆಪುಣಿ ಕೋರ್ದಬ್ಬು ದೈವಸ್ಥಾನದ ಹಿಂಭಾಗ ಎ.೨೦ರ ಸಂಜೆ ಸಂಭವಿಸಿದೆ.

Ad Widget ... ..

ಬಜಾಲ್‌ನ ಹಿದಾಯತುಲ್ಲ ಅವರ ಪುತ್ರ ಮೊಹಮ್ಮದ್ ಜೀಶನ್ (6) ಮೃತಪಟ್ಟ ಬಾಲಕ. ಈತ ಸಂಜೆ 6 ಗಂಟೆಯ ಸುಮಾರಿಗೆ ದೈವಸ್ಥಾನದ ಹಿಂಭಾಗದ ರಸ್ತೆಯ ಕೆರೆಯ ಬಳಿ ಸೈಕಲ್‌ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

ಬಾಲಕ ಸೈಕಲ್ ನಲ್ಲಿ ಮನೆಯ ಬಳಿ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಟಿಪ್ಪರ್ ಬಾಲಕನ ಮೇಲೆ ಹರಿದಿದೆ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.

Leave a Comment

Your email address will not be published. Required fields are marked *