Ad Widget .

ಬೆಳ್ತಂಗಡಿ : ಮದ್ಯ ಎಂದು ಆ್ಯಸಿಡ್ ಕುಡಿದು ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್ : ಮದ್ಯ ಕುಡಿಯುವ ಆತುರದಲ್ಲಿ ಆ್ಯಸಿಡ್ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಉಜಿರೆ ಸಮೀಪದ ನೆರಿಯ ಗ್ರಾಮದಲ್ಲಿ ಏ. 18 ರಂದು ನಡೆದಿದೆ.

Ad Widget . Ad Widget .

ನೆರಿಯ ಗ್ರಾಮದ ಹೇರಾಳ್ ನಿವಾಸಿ ಬಾಬು ( 62) ಎಂಬುವರು ಮೃತಪಟ್ಟ ವ್ಯಕ್ತಿ. ಇವರು ರಬ್ಬರ್ ಶೀಟ್ ಹೊಡೆಯುವ ಶೆಡ್ ಗೆ ಕೆಲಸದ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿ ತೆಗೆದುಕೊಂಡು ಹೋಗಿ ಇಟ್ಟಿದ್ದರು. ಇವರ ಕುಡಿತದ ಚಟ ಬಹುಶಃ ಮಕ್ಕಳಿಗೆ ಗೊತ್ತಿತ್ತೇನೋ. ಹಾಗಾಗಿ ಶೆಡ್ ಗೆ ಮಕ್ಕಳು ಬಂದಿದ್ದಾರೆ. ಮಕ್ಕಳು ದೂರದಲ್ಲಿ ಬರುವುದನ್ನು ಕಂಡು ಅವಸರದಲ್ಲಿ ಮದ್ಯದ ಬಾಟಲಿ ಎಂದು ಆ್ಯಸಿಡ್ ಬಾಟಲಿ ತೆಗೆದು ಕೊಂಡು ಕುಡಿದಿದ್ದಾರೆ. ಅನಂತರ ಕೆಳಗೆ ಬಿದ್ದ ಅವರು ವಿಲವಿಲನೆ ಒದ್ದಾಡಿದ್ದಾರೆ. ಹತ್ತಿರ ಬಂದ ಮಕ್ಕಳು ಏನಾಯಿತು ಎಂದು ಕಂಡು, ಅಪ್ಪನನ್ನು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Ad Widget . Ad Widget .

ಹೆಚ್ಚಿನ ಚಿಕಿತ್ಸೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು‌. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *