ಸಮಗ್ರ ನ್ಯೂಸ್: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ ದೇಶದಲ್ಲಿ 2,183 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಹೊಸ ಪ್ರಕರಣಗಳಲ್ಲಿ ಶೇ. 89.8 ಏರಿಕೆಯಾಗಿದ್ದು, ಕೊರೊನಾ 4 ನೇ ಅಲೆ ಆತಂಕ ಎದುರಾಗಿದೆ.
ಸೋಮವಾರ ದೇಶದಲ್ಲಿ ಕೊರೊನಾ ಸೋಂಕಿನಿಂದ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ 212 ಮಂದಿ ಮೃತಪಟ್ಟಿದ್ದಾರೆ.
ಜೊತೆಗೆ ಸೋಂಕು ಹರಡುವ ಪ್ರಮಾಣದ ಸೂಚಕವಾದ ದೈನಿಕ ಪಾಸಿಟಿವಿಟಿ ದರ ಶೇ. 0.83 ಕ್ಕೆ ಜಿಗಿದಿದೆ. ಸೋಮವಾರ 11,558 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಮಂಗಳವಾರ 11,542 ಕ್ಕೆ ಏರಿಕೆಯಾಗಿದೆ.
ಇನ್ನು ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮ ಮರು ಜಾರಿಗೆ ತರಲು ನಿರ್ಧರಿಸಲಾಗಿದೆ. ಲಖನೌ ಹಾಗೂ ದೆಹಲಿ ವಲಯದ ಜಿಲ್ಲೆಗಳ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿವೆ.