ಬೆಂಗಳೂರು : ಹುಬ್ಬಳ್ಳಿ ಗಲಭೆ ಹಿನ್ನೆಲೆ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ. ಗಲಭೆಗೆ ಕಾರಣಕರ್ತರನ್ನು ಬಂಧಿಸಿ ನಿರಪರಾಧಿಗಳಿಗೆ ವಿಚಾರಣೆ ಮಾಡಿ ಬಿಡಬೇಕು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ ,ನಿಮ್ಮ ತಂದೆ ಒಳ್ಳೆ ಹೆಸರು ಪಡೆದು ಹೋಗಿದ್ದಾರೆ .ಮನುಷ್ಯ ಹೋದ ಮೇಲೂ ಜನ ಅವರನ್ನು ಹೊಗಳಬೇಕು. ರೌಡಿಗಳು ಸತ್ತರೆ ಇಪ್ಪತೈದು ಲಕ್ಷ ಪರಿಹಾರ ಕೊಡ್ತೀರಾ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೂ ಪರಿಹಾರ ಕೊಡಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು . ಹೊರರಾಜ್ಯದ ಪೊಲೀಸರಿಗೆ ಅಥವಾ ಸಿಬಿಐ ತನಿಖೆಗೆ ವಹಿಸಿ. ಈ ಬಗ್ಗೆ ಸಿಎಂ ಬೊಮ್ಮಾಯಿ ಸರ್ವಪಕ್ಷದ ಸದಸ್ಯರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿ.ಎಂ ಇಬ್ರಾಹಿಂ ಆಗ್ರಹಿಸಿದ್ದಾರೆ..