Ad Widget .

ಸುಳ್ಯ : ಮನೆ ಗೋಡೆ ಜರಿದು ಬಿದ್ದು ಯಜಮಾನ ಮೃತ್ಯು

ಸಮಗ್ರ ನ್ಯೂಸ್ : ಪೆರಾಜೆ ಗ್ರಾಮದ ನಿಡ್ಯಮಲೆ ಎಂಬಲ್ಲಿ ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆ ಜರಿದು ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಎ.17 ರಂದು ವರದಿಯಾಗಿದೆ.

Ad Widget . Ad Widget .

ಪೆರಾಜೆ ನಿಡ್ಯಮಲೆ ನಾಗಪ್ಪ ನಾಯ್ಕ ಮೃತ ದುರ್ದೈವಿ. ಎ.17 ರಂದು ಬೆಳಗ್ಗೆ ನಾಗಪ್ಪ ನಾಯ್ಕರು ಹಾಗೂ ಅವರ ಮಗ ದರ್ಶನ್ ತಮ್ಮ ಹಳೆ ಮನೆಯ ಗೋಡೆಯನ್ನು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರು. ಈ ವೇಳೆ ಕೆಡವುತ್ತಿದ್ದ ಗೋಡೆ ಜರಿದು ಬಿತ್ತೆನ್ನಲಾಗಿದೆ. ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗಪ್ಪರು ಗೋಡೆ ಜರಿಯುತ್ತಿದ್ದುದನ್ನು ತಿಳಿದು ಅಲ್ಲಿಂದ ಮುಂದಕ್ಕೆ ಬರುತ್ತಿದ್ದಂತೆ ಗೋಡೆ ಅವರ ಮೇಲೆ ಬಿದ್ದಿದೆ. ಈ ಪರಿಣಾಮ ಅವರ ಅರ್ಧ ದೇಹ ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿತ್ತು.

Ad Widget . Ad Widget .

ತಕ್ಷಣ ಜತೆಗೆ ಕೆಲಸ ಮಾಡಿಕೊಂಡಿದ್ದ ಅವರ ಮಗ ಹಾಗೂ ಮನೆಯವರು ಅವರನ್ನು ಮಣ್ಣಿನಿಂದ ಹೊರತೆಗೆದಿದ್ದರು. ಬಳಿಕ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದು ಇಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟ ರೆಂದು ತಿಳಿದು ಬಂದಿದೆ.

ಮೃತರು ಪತ್ನಿ ರೇವತಿ, ಮಗ ದರ್ಶನ್, ಮಗಳು ಧನ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *