ಸಮಗ್ರ ನ್ಯೂಸ್: ಡಾ.ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಇದೀಗ ಆಧುನಿಕ ತಂತ್ರಜ್ಞಾನದಿಂದ ಮತ್ತೆ ಅವರದ್ದೇ ಧ್ವನಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಹೌದು.. ಅಪ್ಪು ಧ್ವನಿ ಮರುಸೃಷ್ಟಿಸಿದ ಹೈದರಾಬಾದ್ ಸೌಂಡ್ ನಲ್ಲಿ, ಏಪ್ರಿಲ್ 22 ರಿಂದ ಪುನೀತ್ ಧ್ವನಿಯಲ್ಲೇ ಚಿತ್ರ ಪ್ರದರ್ಶನಕ್ಕೆ, ಚಿತ್ರತಂಡ ಮುಂದಾಗಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್ ಇಂಜಿನಿಯರ್ ಶ್ರೀನಿವಾಸ್ ರಾವ್, ಕೊನೆಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಅವರ ಧ್ವನಿಯನ್ನು ರೀ ಕ್ರಿಯೇಟ್ ಮಾಡಲು ಯಶಸ್ವಿಯಾಗಿದ್ದಾರೆ.
ಅಪ್ಪು ಅವರ ಹಿಂದಿನ ಚಿತ್ರಗಳು ಹಾಗೂ ಕನ್ನಡದ ಕೋಟ್ಯಾಧಿಪತಿಯಲ್ಲಿ ಅವರು ಮಾತನಾಡಿದ್ದು ಸೇರಿ 15 ಗಂಟೆಗಳ ಅವಧಿಯ ಧ್ವನಿಯನ್ನು ಪಡೆದು, 16 ಮಂದಿ ತಂಡ ಸೇರಿ, ಇದೀಗ ಪುನೀತ್ ಧ್ವನಿಯನ್ನು ಡಬ್ ಮಾಡಲು ಯಶಸ್ವಿಯಾಗಿದ್ದಾರೆ.
ಈ ರೀತಿಯಲ್ಲಿ ಬಿಡುಗಡೆಯಾದ ಅಪ್ಪು ಕೊನೆಯ ಚಿತ್ರ ಜೇಮ್ಸ್ ಅನ್ನು, ಏಪ್ರಿಲ್ 22 ರಿಂದ ಪುನೀತ್ ಧ್ವನಿಯಲ್ಲಿಯೇ ನೋಡುವಂತೆ ಆಗಲಿ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.