ಮೇಷ: ಈ ತಿಂಗಳ 28ರ ನಂತರ ಬಹಳ ಎಚ್ಚರಿಕೆಯಿಂದ ಸಾಗಬೇಕು. ಕೀರ್ತಿಗೆ ಧಕ್ಕೆ ಬಂದು ಜನಾನುರಾಗ ಕಳೆದುಕೊಳ್ಳಬಹುದು. ಸಂಚಿನಲ್ಲಿ ಸಿಲುಕಿ ದುಃಖ ಪಡುವ ಸಂದರ್ಭ ಬರಬಹುದು. ಅದಕ್ಕಾಗಿ 14 ತಿಂಗಳುಗಳ ಕಾಲ ಅಂದರೆ ಗುರುವು ಮೇಷರಾಶಿಗೆ ಬರುವವರೆಗೂ ದತ್ತಾತ್ರೇಯನ ಪೂಜೆ ಮಾಡುವ ಜತೆಗೆ, ಸುಬ್ರಹ್ಮಣ್ಯ ದೇವರನ್ನೂ ಪೂಜಿಸಿ.
ವೃಷಭ: ಏಕಾದಶಕ್ಕೆ ಗುರು ಬಂದಿದ್ದಾನೆ. ರಾಹು-ಕೇತುಗಳು ಚಲನವನ್ನು ತೋರಿಸುತ್ತಿದ್ದಾರೆ. ಕುತಂತ್ರವನ್ನು ದೇವರು ಒಪುಪವುದಿಲ್ಲ. ಧರ್ಮವೇ ಬುದ್ಧಿಯ ಮೂಲವಾಗಿರಬೇಕು. ಏಕಾದಶ ಗುರುವನ್ನು ಸದ್ವಿನಿಯೋಗಿಸಿಕೊಳ್ಳಿ. ಗುರುಸೇವೆ ಬಿಡದೆ ಮಾಡಿದಲ್ಲಿ ಕೀರ್ತಿಯನ್ನು ಪಡೆಯುವಿರಿ. ಚಂಡಿಕಾ ಸ್ತೋತ್ರ ಪಠಿಸಿ.
ಮಿಥುನ: ದಶಮದ ಗುರುವಿಗಾಗಿ ಪ್ರಾರ್ಥನೆ ಅಗತ್ಯ. ಕೃಷ್ಣನನ್ನು ಆರಾಧಿಸಿ. ಮಾತಾ-ಪಿತರನ್ನು ಗೌರವದಿಂದ ಕಾಣಿರಿ. ಕೊಟ್ಟ ಮಾತು ನಡೆಸುವ ಸಂಕಲ್ಪವಿಟ್ಟು, ಉನ್ಮತ್ತದಿಂದ ವರ್ತಿಸದೆ ಇದ್ದರೆ ದೇವರು ನಿಮಗೆ ರಕ್ಷೆ ನೀಡುತ್ತಾನೆ. ಸಾಯಂಕಾಲದಲ್ಲಿ ಕೃಷ್ಣನಿಗೆ ನಮಸ್ಕಾರ ಮಾಡಿ ಹಾಲು-ಜೇನು ನೈವೇದ್ಯ ಮಾಡಿ.
ಕಟಕ: ಶನಿಯು ಏಪ್ರಿಲ್ 28ರ ನಂತರ ಮುಂದೆ ಅಷ್ಟಮಕ್ಕೆ ಬಂದರೂ ಗುರುವು ನವಮದ ಫಲ ಕೊಟ್ಟು ಸಂರಕ್ಷಣೆ ಮಾಡುತ್ತಾನೆ. ಕೆಲಸ-ಕಾರ್ಯಗಳಲ್ಲಿ ಅಗತ್ಯವಿರುವ ಧನವನ್ನು, ತೃಪ್ತಿಯನ್ನು, ಸಂತಸವನ್ನು ನೀಡುತ್ತಾನೆ. ನಿತ್ಯವೂ ಶನಿ ಅಷ್ಟೋತ್ತರ ಪಾರಾಯಣ ಮಾಡಿ.
ಸಿಂಹ: ಗುರು-ಶನಿ ಸ್ಥಾನ ಪಲ್ಲಟವಾದರೂ ಸದಾ ಬೆಳಕನ್ನು ಕೊಡುವ ಸೂರ್ಯನ ರಾಶಿಯಲ್ಲಿ ಜನಿಸಿದ್ದಿರಿ. ಅಗತ್ಯವಿರುವುದೆಲ್ಲ ಸಿಕ್ಕೇ ಸಿಗುತ್ತದೆ. ದೈವದ ಬಲ ಸದಾಕಾಲ ಅಗತ್ಯ. ಕುಲದೇವರನ್ನು ಪೂಜಿಸಿ. ಸೂರ್ಯ ನಾರಾಯಣನನ್ನು ಪೂಜಿಸಿ -ಪ್ರಾರ್ಥಿಸಿ. 11 ಬಾರಿ ಆದಿತ್ಯ ಹೃದಯ ಪಾರಾಯಣವನ್ನು ಮಾಡಿರಿ.
ಕನ್ಯಾ: ಅತಂತ್ರ ಸ್ಥಿತಿಯಲ್ಲಿದ್ದ ಗ್ರಹಗಳು ಕನ್ಯಾ ರಾಶಿಗೆ ಸುಸ್ಥಿತಿಗೆ ಬಂದಿವೆ. ಆನಂದವನ್ನು ಕ್ರಯ-ವಿಕ್ರಯ ಮಾಡಲಾಗದು. ಧರ್ಮದ ಜೊತೆ ಜೊತೆಗೆ ಹೆಜ್ಜೆ ಹಾಕಿ, ಮುಂದೆ ಸಾಗಿ. ಗುರುವು ರಕ್ಷಿಸುತ್ತಾನೆ. ಶನಿಯು ಅಪೇಕ್ಷೆಯನ್ನು ಈಡೇರಿಸುತ್ತಾನೆ.
ತುಲಾ: ಚತುರ್ಥದಲ್ಲಿ ಶನಿ, ಆರನೇ ಮನೆಯಲ್ಲಿ ಗುರು ಇದ್ದಾನೆ. ರಾಶ್ಯಾಧಿಪತಿ ಶುಕ್ರನಿಗಾಗಿ ದುರ್ಗಾದೇವಿಯನ್ನು ಧ್ಯಾನಿಸಿ. ಖಡ್ಗಮಾಲಾ ಸ್ತೋತ್ರ ಪಾರಾಯಣ ಮಾಡಿರಿ. ಕಷ್ಟಗಳು ದೂರವಾಗಿ, ಎಲ್ಲವೂ ಕೈ ಸೇರುತ್ತವೆ.
ವೃಶ್ಚಿಕ: ಧನವು ಹುಡುಕುವ ವಸ್ತುವಲ್ಲ. ಹರಿವ ನೀರಿನಿಂತೆ ಪುಣ್ಯವು ಹರಿದು ಬಂದು ನಮಗೆ ಸೇರುವ ಕಾಲ. ಋಣದ ಬಾಧೆಯನ್ನು ತೀರಿಸಿ. ಕೊಟ್ಟ ಮಾತು ಉಳಿಸಿಕೊಳ್ಳಿ. ನಿಮ್ಮ ಪಿತೃದೇವತೆಗಳು ಸಂತೃಪ್ತರಾಗುತ್ತಾರೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಪ್ರತಿ ಮಂಗಳವಾರದಂದು ಗಣೇಶನನ್ನು ಪೂಜಿಸಿ.
ಧನು: ವಿದ್ಯೆಯಲ್ಲಿ ಧನುರ್ ವಿದ್ಯೆಯೇ ದೊಡ್ಡ ವಿದ್ಯೆ. ಅದಕ್ಕೆ ಮಿಗಿಲಾಗಿ ದೈವಬಲವೇ ವಿದ್ಯೆಯ ಜೊತೆ ಬುದ್ಧಿಯನ್ನು ಕಲಿಸಿ ಶಸ್ತ್ರಗಳಾಗಿ ನಿಮ್ಮನ್ನು ಸಹಿಸಲಾರದವರಿಗೆ ಮುಳ್ಳಾಗುತ್ತದೆ. ಶನಿಯು ಮುಂದೆ ಹೋಗಲಿದ್ದಾನೆ. ಚತುರ್ಥ ಗುರುವಿರುವುದರಿಂದ ಅವಾಂತರ ಬೇಡ. ಶ್ರೀರಾಮನನ್ನು ಭಜಿಸಿ, ಪೂಜಿಸಿ.
ಮಕರ: ಮಿಂಚಿನಂತೆ ಹಾದು ದಾರಿ ತೋರಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವವನು ಗುರುವೇ. ಜನ್ಮ ಶನಿ ಏ.28ರಿಂದ ಮುಂದೆ ಸಾಗಿ ಕುಂಭಕ್ಕೆ ಬರುತ್ತಾನೆ. ಈಶ್ವರನನ್ನು ಆರಾಧಿಸಿ. ಶನಿಗೆ ಶನಿವಾರದಂದು ಎಳ್ಳು-ಬೆಲ್ಲ ನೈವೇದ್ಯ ಮಾಡಿ. ಸಂಕಟ ಕಳೆಯುವುದು.
ಕುಂಭ: ಗುರುವು ದ್ವಿತೀಯಕ್ಕೂ, ಲಗ್ನದಲ್ಲಿ ಶನಿಯು ಸ್ವಕ್ಷೇತ್ರಕ್ಕೆ ಸೇರಲಿದ್ದಾನೆ. 2ನೇ ಮನೆಯ ಗುರುವು ರಕ್ಷಣೆ ಮಾಡುತ್ತಾನೆ. ಶನಿಯು ಸರಿಯಾದ ಬುದ್ಧಿ ಕೊಟ್ಟು ಜೀವನದ ವೀಣೆ ನುಡಿಸುತ್ತಾನೆ. ಭಕ್ತಿಯಿಂದ ದತ್ತಾತ್ರೇಯನನ್ನು ಭಜಿಸಿ. ದೇವರು ಒಲಿದು ನಿಮ್ಮನ್ನು ರಕ್ಷಿಸುತ್ತಾನೆ.
ಮೀನ: ಲಗ್ನದಲ್ಲಿ ಗುರು ಸೇರಿ ಏಕಾದಶವನ್ನು, ಶನಿಯು ದ್ವಾದಶಕ್ಕೆ ಬರಲಿದ್ದಾನೆ. ಹರಿಚಿತ್ತ ಸತ್ಯವಾದುದು. ಕಷ್ಟ ಕಾಲದಲ್ಲಿ ದೇಶ-ಕಾಲ-ಸಂದರ್ಭ- ಮನುಷ್ಯನನ್ನು ಅನುಸರಿಸಿ ನಡೆದರೆ ಯಾವ ಸಮಸ್ಯೆಯೂ ಬರುವುದಿಲ್ಲ. 7.5 ವರ್ಷದ ಶನಿ ಸಂಚಾರ ಬಂದಿರುವುದರಿಂದ ದೇವರನ್ನು ಧ್ಯಾನಿಸಲೇ ಬೇಕು. ಈಶ್ವರನನ್ನು, ಪಾರ್ವತಿನಂದನ ಕಾರ್ತಿಕೇಯನನ್ನು ಪೂಜಿಸಿ.