ವಿವಾಹ ನೋಂದಣಿ ಅಧಿಕಾರಿಯಾಗಿ ಪಿಡಿಒಗಳ ನೇಮಕ; ಸರ್ಕಾರದಿಂದ ಅಧಿಕೃತ ಆದೇಶ

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳನ್ನು ವಿವಾಹ ನೋಂದಣಿ ಅಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲೇ ವಿವಾಹ ದೃಢಪತ್ರ ಸಿಗಲಿದೆ.

Ad Widget ... ..

ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಿದ್ದು, ಮದುವೆ ನೋಂದಣಿ‌ ಅಧಿಕಾರವನ್ನ ನೀಡಲಾಗಿದೆ.

Ad Widget

ವಿವಾಹ ನೋಂದಣಿ ಮಾಡಿಸಿ
ಕೊಳ್ಳಲು ತಾಲ್ಲೂಕು ಕೇಂದ್ರಗಳಿಗೆ ಬರಬೇಕಿತ್ತು. ಸರ್ಕಾರದ ಈ ಹೊಸ ತೀರ್ಮಾನದಿಂದಾಗಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನಗಳಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಇದರಿಂದ ತಾಲ್ಲೂಕು ಕೇಂದ್ರಕ್ಕೆ ಓಡಾಡುವ ತೊಂದರೆಯೂ ತಪ್ಪಲಿದೆ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಜನನ-ಮರಣದ ನೋಂದಣಿ ಅಧಿಕಾರವನ್ನು ‍‍‍ಪಿಡಿಒಗಳಿಗೆ ವಹಿಸಿ ಈ ಹಿಂದೆ ಸರ್ಕಾರ ಆದೇಶ ಹೊರಡಿಸಿತ್ತು.

Leave a Comment

Your email address will not be published. Required fields are marked *