ರಷ್ಯಾ ಉಕ್ರೇನ್ ಯುದ್ದ ದೇಶದೆಲ್ಲೆಡೆ ಭಯ ಬೀಳಿಸಿದೆ. ರಷ್ಯಾ ಸೇನೆ ವಾಪಸಾತಿ ನಂತರ ಉಕ್ರೇನ್ ರಾಜಧಾನಿ ಕೈವ್ ಸುತ್ತಮುತ್ತ 900ಕ್ಕೂ ಹೆಚ್ಚು ನಾಗರಿಕ ದೇಹಗಳು ಪತ್ತೆಯಾಗಿದ್ದು. ಅವರಲ್ಲಿ ಹೆಚ್ಚಿನವರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ರಾಜಧಾನಿಯ ಪ್ರಾದೇಶಿಕ ಪೊಲೀಸ್ ಪಡೆಯ ಮುಖ್ಯಸ್ಥ ಕೈವ್ ಸುತ್ತಲೂ ಶವಗಳನ್ನು ಬೀದಿಗಳಲ್ಲಿ ಬಿಡಲಾಗಿದೆ ಹಾಗೆ ತಾತ್ಕಾಲಿಕ ಸಮಾಧಿ ಮಾಡಲಾಗಿದೆ. ಶೇ.95 ಮಂದಿ ಗುಂಡೇಟಿನ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ರಷ್ಯನ್ ಪಡೆಗಳು ಉಕ್ರೇನ್‍ನ ಸೇನೆಯನ್ನಷ್ಟೇ ಅಲ್ಲ, ಜನರನ್ನು ಬೀದಿಗಳಲ್ಲಿ ಸರಳವಾಗಿ ಗಲ್ಲಿಗೇರಿಸಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ , ರಷ್ಯಾದ ಪಡೆಗಳು ದಕ್ಷಿಣದಲ್ಲಿ ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಉಕ್ರೇನ್ ಮಿಲಿಟರಿ ಮತ್ತು ಸರ್ಕಾರಿ ನೌಕರರನ್ನು ಹತ್ಯೆ ಮಾಡುವ ಸಾಧ್ಯತೆ ಇದೆ. ಹೊಸದಾಗಿ ಆಕ್ರಮಿತ ಪ್ರದೇಶದಿಂಂದ ಯುದ್ಧ ನಿಯಂತ್ರಣ ಸುಲಭ ಎಂಬ ಭ್ರಮೆಯಲ್ಲಿ ರಷ್ಯಾ ಇದೆ, ಆದರೆ ಅದು ತಪ್ಪು ಕಲ್ಪನೆ ಎಂದಿದ್ದಾರೆ.
ಉಕ್ರೇನ್ ರಷ್ಯಾದ ಭೂಪ್ರದೇಶದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ನಡೆಸಿದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಕೈವ್ ಮೇಲೆ ಕ್ಷಿಪಣಿ ದಾಳಿ ಹೆಚ್ಚಿಸಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.
ಮಾರಿಯುಪೋಲ್‍ನ ಕೈಗಾರಿಕಾ ಪ್ರದೇಶಗಳು ಮತ್ತು ಬಂದರಿನಲ್ಲಿ ಹೋರಾಟ ಮುಂದುವರೆದಿದೆ. ಶುಕ್ರವಾರ ನಾಗರಿಕರನ್ನು ಸಾಗಿಸುತ್ತಿದ್ದ ಬಸ್‍ಗಳ ಮೇಲೆ ರಷ್ಯಾದ ಪಡೆಗಳು ಗುಂಡು ಹಾರಿಸಿದ್ದರಿಂದ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಉಕ್ರೇನ್‍ನಲ್ಲಿ ಹೊಸ ಆಕ್ರಮಣಕ್ಕಾಗಿ ರಷ್ಯಾ ಸಿದ್ಧತೆಗಳನ್ನು ಮುಂದುವರೆಸಿದೆ. ದಕ್ಷಿಣದ ಬಂದರು ನಗರ ಮರಿಯುಪೋಲ್‍ನಲ್ಲಿಯೂ ಸಹ ಹೋರಾಟಗಳು ಚಾಲ್ತಿಯಲ್ಲಿವೆ. ರಷ್ಯಾದ ಯೋಧರ ದೇಹಗಳನ್ನುಮುಚ್ಚಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಶಾನ್ಯ ನಗರವಾದ ಖಾರ್ಕಿವ್‍ನಲ್ಲಿ ವಸತಿ ಪ್ರದೇಶದ ಮೇಲೆ ಶೆಲ್ ದಾಳಿ ನಡೆದಿದ್ದರಿಂದ 7 ತಿಂಗಳ ಮಗು ಸೇರಿದಂತೆ ಏಳು ಜನ ಮೃತಪಟ್ಟು, 34 ಮಂದಿ ಗಾಯಗೊಂಡಿದ್ದಾರೆ.