ಸಮಗ್ರ ನ್ಯೂಸ್: ಸುಳ್ಯ ಸಮೀಪದ ಕುಕ್ಕಾಜೆಕಾನ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.16ರಂದು ನಡೆದಿದೆ.
ಸೋಣಂಗೇರಿ, ಮಂಗಳೂರು ಮೊದಲಾದೆಡೆ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಗಿದ್ದ ಕುಕ್ಕಾಜೆಕಾನದ ಮಾಧವ ನಾಯ್ಕ್ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದರು.
ಎ.16 ರಂದು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಮೈಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಎ.17 ರಂದು ರಾತ್ರಿ ಸುಳ್ಯ ಕುಕ್ಕಾಜೆಕಾನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮಾಧವ ನಾಯ್ಕರು ಮೂರ್ನಾಲ್ಕು ವರ್ಷಗಳ ಹಿಂದೆ ಪೋಸ್ಟ್ ಮ್ಯಾನ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಮೈಸೂರಿಗೆ ಹೋಗಿದ್ದರು. ಮೃತರು ಪುತ್ರಿ ಐಶ್ವರ್ಯ, ಅಳಿಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.