Ad Widget .

ಶೃಂಗೇರಿ ಶಾರದೆಗೆ ಪ್ರಕೃತಿಯ ಪ್ರಭಾವಳಿ| ಗುಡುಗು- ಮಿಂಚಿನ ಸಮ್ಮಿಲನದಲ್ಲಿ ಅತ್ಯದ್ಭುತ ನೋಟ|

ಸಮಗ್ರ ನ್ಯೂಸ್: ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

Ad Widget . Ad Widget .

ಈ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮಳೆ ಜೊತೆಗೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯಕಾವ್ಯ ನೋಡುಗರ ಮನಸೊರೆಗೊಂಡಿದೆ.

Ad Widget . Ad Widget .

ನಿನ್ನೆ ಸಂಜೆ ವೇಳೆಗೆ ಶೃಂಗೇರಿ ದೇಗುಲದಲ್ಲಿ ಶಾರದಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಈ ಅಪರೂಪದ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶೃಂಗೇರಿ ಶಾರದಾಂಬೆ ದೇಗುಲದ ಆಕಾಶದ ಮೇಲ್ಭಾಗದಲ್ಲಿ ದೇಗುಲವನ್ನು ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಬೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ.

ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರುವ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಮತ್ತಷ್ಟು ಇಮ್ಮಡಿಗೊಂಡಿದೆ. ಈ ಸುಂದರ ಕ್ಷಣವನ್ನ ಕಣ್ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್‍ನಲ್ಲಿ ಈ ಅಪರೂಪದ ಘಳಿಗೆಯನ್ನು ಸೆರೆ ಹಿಡಿದಿದ್ದಾರೆ. ಆದರೆ, ಎಲ್ಲರ ಮೊಬೈಲ್‍ನಲ್ಲೂ ಈ ಅಪರೂಪದ ಘಳಿಗೆ ಸೆರೆಯಾಗಿಲ್ಲ.

Leave a Comment

Your email address will not be published. Required fields are marked *