ಸಮಗ್ರ ನ್ಯೂಸ್: ಹರ್ಷ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನ ಹತ್ಯೆಗೆ ಸ್ಕೆಚ್ ಹಾಕಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಶಿವಮೊಗ್ಗ ನಗರದ ಪೊಲೀಸರು, ರೌಡಿ ಶೀಟರ್ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ಬಳಿಕ, ಮತ್ತೊಂದು ಕೋಮುಗಲಭೆಗೆ ಸಂಚನ್ನು ರೌಡಿ ಶೀಟರ್ ಪ್ರವೀಣ್ ಅಂಡ್ ಟೀಂ ರೂಪಿಸಿತ್ತು ಎನ್ನಲಾಗಿದೆ. ಈ ಮಾಹಿತಿಯನ್ನು ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು, ರೌಡಿ ಶೀಟರ್ ಪ್ರವೀಣ್ ಎಂಬಾತ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಯಾವ ಸಂಘಟನೆಯಲ್ಲೂ ಗುರುತಿಸಿಕೊಳ್ಳದ ಅಲ್ಲಾವುದ್ದೀನ್ ಎಂಬಾತನನ್ನು ಹರ್ಷನ ಕೊಲೆಗೆ ಪ್ರತೀಕಾರವಾಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ ಮಾರಕಾಸ್ತ್ರ, ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಪೊಲೀಸ್ ಸಮಯ ಪ್ರಜ್ಞೆಯಿಂದ ನಗರದಲ್ಲಿ ಉಂಟಾಗಲಿದ್ದ ಮತ್ತೊಂದು ಕೋಮು ಗಲಭೆ ತಪ್ಪಿದೆ.