ಸಮಗ್ರ ನ್ಯೂಸ್ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಆರೋಪ ಹಿನ್ನೆಲೆ ಸಚಿವ ಕೆ.ಎಸ್. ಈಶ್ವರಪ್ಪ ನಿನ್ನೆ ಸಂಜೆ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸಂತೋಷ್ ಸಾವಿನ ಸುತ್ತ ಅನುಮಾನಗಳು ಹೆಚ್ಚಾಗುತ್ತಿದ್ದು, ಸಾವಿಗೂ ಮುನ್ನ ಏನು ಮಾಡಿದ್ದಾರೆ ರಹಸ್ಯ ಮಾಹಿತಿಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಶಾಂಭವಿ ಲಾಡ್ಜ್ ನಲ್ಲಿ ಏನಾಗಿತ್ತು?
ಉಡುಪಿಯ ಶಾಂಭವಿ ಲಾಡ್ಜ್ ಗೆ ರಾತ್ರಿ 9.30ಕ್ಕೆ ಕೊಠಡಿಗೆ ಬಂದು ಡೋರ್ ಲಾಕ್ ಮಾಡಿಕೊಂಡು ಏಕಾಂಗಿಯಾಗಿ 2 ಗಂಟೆಗಳ ಕಾಲ ಇದ್ದರು. ರಾತ್ರಿ 11.19-11.45ರವರೆಗೆ ಹಲವರಿಗೆ ತನ್ನ ಮೊಬೈಲ್ ಮೂಲಕ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ನೇರ ಕಾರಣ ಎಂದು ಮೆಸೇಜ್ ಮಾಡಿದ್ದಾರೆ. ಬಳಿಕೆ ಮೆಸೇಜ್ ಬಳಿಕ ಜ್ಯೂಸ್‌ನಲ್ಲಿ ವಿಷ ಬೆರಸಿ ಸೇವನೆ ಮಾಡಿದ್ದಾರೆ.
ರಾತ್ರಿ 12-12.45ರ ನಡುವೆ ಸಾವನ್ಬಪ್ಪಿದ್ದಾರೆ. ಸಾವಿನ ರಾತ್ರಿ ಸಂತೋಷ್ ಬರೊಬ್ಬರಿ 88 ಫೋನ್ ಕರೆ ಬಂದಿದೆ. 7 ಗಂಟೆ ಸುಮಾರಿಗೆ ಸ್ನೇಹಿತರು ಕರೆ ಮಾಡಿದ್ದು ರಿಸೀವ್ ಮಾಡದ ಕಾರಣ ಬೆಳ್ಳಂಬೆಳಗ್ಗೆ ಪಕ್ಕದಲ್ಲೇ ರೂಮ್‌ನಲ್ಲೇ ಇದ್ದ ಮೇದಪ್ಪ, ಪ್ರಶಾಂತ್ ಗಾಬರಿಗೊಂಡಿದ್ದಾರೆ. ಬಳಿಕ ಡೂಪ್ಲಿಕೇಟ್ ಕೀ ತರಿಸಿ ರೂಮ್ ಬಾಗಿಲು ತೆಗೆಸಿದಾಗ ಸಂತೋಷ್ ಸಾವನ್ನಪ್ಪಿದ್ದನ್ನು ನೋಡಿ ಸ್ನೇಹಿತರಿಗೆ ಶಾಕ್ ಆದರು. ಆಗ ದೇಹ ನೀಲಿ ಬಣ್ಣಕ್ಕೆ ತಿರುಗಿ, ಜೊಲ್ಲು ಸುರಿದಿತ್ತು.
ಕ್ರಿಮಿನಾಶಕ ಸೇವಿಸಿದ್ರಾ ಸಂತೋಷ್!?
ಸಂತೋಷ್ 450 ರೂಪಾಯಿ ಕೊಟ್ಟು 1 ಲೀಟರ್ ಕ್ರಿಮಿನಾಶಕ ಖರೀದಿಸಿದ್ದು ಬೆಳಕಿಗೆ ಬಂದಿದೆ. ಬೆಳೆಗೆ ಸಿಂಪಡಿಸೋ ಅಪಾಯಕಾರಿ ಕ್ರಿಮಿನಾಶಕ ವನ್ನು ಆರೆಂಜ್ ಜ್ಯೂಸ್‌ನೊಂದಿಗೆ ಬೆರೆಸಿ ಕುಡಿದು ಪ್ಲಾನ್ ಮಾಡಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಂತೋಷ್ ನರಳಾಟದ ಸಾವು
ವಿಷ ಸೇವನೆ ಬಳಿಕ ಬೆಡ್ ಮೇಲೆ ವಿಲವಿಲ ಒದ್ದಾಡಿ ಜೀವಬಿಟ್ಟಿದ್ದಾರೆ ಕೆಲವೇ ಕ್ಷಣದಲ್ಲಿ ರಕ್ತದಲ್ಲಿ ಬೆರೆತ ವಿಷ ನರಳಾಡಿ ಬೆಡ್ ಮೇಲೆಯೇ ಜೀವನವನ್ನು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದ ರೂಮ್‌ನಲ್ಲೇ ಇದ್ದವರಿಗೆ ಸಾವಿನ ದನಿಯೂ ಕೇಳಿಸಲೇ ಇಲ್ಲ ಅನ್ನೋದು ಮಾಹಿತಿ ಬಹಿರಂಗವಾಗಿದೆ.