ಮಂಗಳೂರು: ಬುರ್ಖಾದೊಳಗೆ ಸಾಗಾಟವಾಗ್ತಿತ್ತು ಲಕ್ಷಮೌಲ್ಯದ ಚಿನ್ನಾಭರಣ| ವಿದೇಶಿ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕೈ ವಶ

ಸಮಗ್ರ ನ್ಯೂಸ್: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕನಿಂದ 5.34 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Ad Widget ... ..

ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ ಆಕಾರದ ವೃತ್ತಾಕಾರದ ಸ್ಪ್ಲಿಟ್ ವಾಷರ್ ಮಾದರಿಯ ವಸ್ತುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕ ಯತ್ನಿಸಿದ್ದ.

Ad Widget

ಈ ಘಟನೆ ಏಪ್ರಿಲ್ 14 ರಂದು ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *