Ad Widget .

ಸುಳ್ಳು ಕೇಸುಗಳಿಗೆ ಎಳ್ಳು ನೀರು ಬಿಡ್ತಾ ಇರುವ ಯುವ ಲಾಯರ್| ಚಿನ್ಮಯನಿರುವಾಗ ಯಾಕೆ ಚಿಂತೆ?

ಸಮಗ್ರ ವಿಶೇಷ: ಹಿಂದೂ ಧರ್ಮರಕ್ಷಣೆ ಹೆಸರಲ್ಲಿ ಅಧಿಕಾರ ಹಿಡಿದವರ ಸರ್ಕಾರ ಇದ್ದಾಗಲೂ ಅದೆಷ್ಟೋ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸುಗಳು ದಾಖಲಾಗುತ್ತಿವೆ. ಸರ್ಕಾರ, ಶಾಸಕರು ಯಾರೇ ಇದ್ದರೂ ಕಾರ್ಯಕರ್ತರಿಗೆ ಪ್ರಯೋಜನವಾಗದೇ ಪೊಲೀಸ್ ಪಾಲಾದಾಗ ಕೂಡಲೇ ಕಾ ರಕ್ಷಣೆಗೆ ಆಗಮಿಸುವ ವ್ಯಕ್ತಿಯ ಹೆಸರೇ ಚಿನ್ಮಯಿ ಈಶ್ವರಮಂಗಲ.

Ad Widget . Ad Widget .

ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿರುವ ಚಿನ್ಮಯ್ ವೃತ್ತಿಯಲ್ಲಿ ವಕೀಲರು. ಯಾವುದೇ ಹಿಂದೂ ಕಾರ್ಯಕರ್ತರು ಹಿಂದುತ್ವದ ಹೋರಾಟದಲ್ಲಿ ಜೈಲು ಸೇರಿದಾಗ ಕೂಡಲೇ ಅವರ ರಕ್ಷಣೆಗೆ ಧಾವಿಸಿ ಬರುತ್ತಾರೆ. ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ಹಿಂದು ಕಾರ್ಯಕರ್ತರಿಗೆ ಕಾನೂನಿನ ನೆರವು ನೀಡುತ್ತಿದ್ದಾರೆ

ಸರ್ಕಾರ ಯಾವುದೇ ಇದ್ದರೂ ಪುತ್ತೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ತೊಂದರೆಯಾದಾಗ ಅದೆಂತಹಾ ಕಾನೂನು ತೊಡಕು ಬಂದರೂ ಕೂಡ ಕಾನೂನಿನ ಮೂಲಕವೇ ಅವರಿಗೆ ನ್ಯಾಯ ಒದಗಿಸುವಲ್ಲಿ ಚಿನ್ಮಯ್ ಈಶ್ವರಮಂಗಲ ಎತ್ತಿದ ಕೈ.

Ad Widget . Ad Widget .

ರಾಜಕೀಯಕ್ಕೆ ಮಾಡದೇ ಸಂಘಟನೆಯ ಮೂಲಕ ಇವರು ಹಿಂದೂ ಸಮಾಜವನ್ನು ಜಾಗೃತಗೊಳಿಸುತ್ತಾರೆ. ಹಿಂದೂ ಸಮಾಜದ ನಿರ್ಮಾಣದ ಕಾರ್ಯದೊಂದಿಗೆ ಪುತ್ತೂರಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಕೂಡ ನಿರ್ವಹಿಸುತ್ತಿದ್ದಾರೆ ಇವರು ಕೇಂದ್ರ ಸರಕಾರದ ಹೆಚ್ಚುವರಿ ಸರಕಾರಿ ವಕೀಲರಾಗಿದ್ದು ಅದೇ ರೀತಿಯಲ್ಲಿ ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೂಡಾ ಹೌದು.

ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ‌ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪುತ್ತೂರಿನ ಯುವ ನಾಯಕ ಎಂದೇ ಬಿಂಬಿತರಾಗಿರುವ ಇವರನ್ನು ಅದೆಷ್ಟೋ ಹಿಂದೂ ಕಾರ್ಯಕರ್ತರು ಮುಂದಿನ ಪುತ್ತೂರಿನ ಶಾಸಕರಾಗಲಿ ಎಂದು ಕೂಡ ಆಶಿಸುತ್ತಿದ್ದಾರೆ‌ ಆದರೆ ರಾಜಕೀಯಕ್ಕೆ ಅಷ್ಟಾಗಿ ಒಲವು ಕೊಡದ ಇವರು ಹಿಂದುತ್ವದ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಹಿಂದೂ ಕಾರ್ಯಕರ್ತರಿಗೆ ಏನೇ ಸಮಸ್ಯೆ ಆದಾಯ ಎಲ್ಲರ ಬಾಯಲ್ಲಿ ಬರುವ ಮಾತು “ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ” ಎಂಬುದು.

ಸದಾ ಹಿಂದುತ್ವದ ರಕ್ಷಣೆ ಮಾಡುತ್ತಾ ತನ್ನೊಂದಿಗೆ ಇತರರನ್ನು ಬೆಳೆಸುತ್ತಾ ಸಮಾಜದ ರಕ್ಷಣೆಗೆ ತಮ್ಮನ್ನು ಮುಡಿಪಾಗಿರುವ ಚಿನ್ಮಯ್ ಈಶ್ವರಮಂಗಲ ಚೆನ್ನಾಗಿರಲಿ ಎಂದು ಅಭಿಮಾನಿಗಳು ಹಾರೈಸುತ್ತಾರೆ.

Leave a Comment

Your email address will not be published. Required fields are marked *