ಸಮಗ್ರ ಡಿಜಿಟಲ್ ಡೆಸ್ಕ್: ವಿಚಿತ್ರ ಘಟನೆಯೊಂದರಲ್ಲಿ ಹಲ್ಲಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆಸಿದ್ದು, ಮೊಬೈಲ್ ನಲ್ಲಿ ದೃಶ್ಯ ಚಿತ್ರೀಕರಿಸಿದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಲ್ಲಿ ಮೇಲೆ ನಾಲ್ವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ‘ಬಂಗಾಳ ಮಾನಿಟರ್ ಹಲ್ಲಿ’ಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ರತ್ನಗಿರಿ ಜಿಲ್ಲೆಯ ಗೋಥಾನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೀಸಲು ಪ್ರದೇಶದ ಚಂದೋಲಿ ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳ ವಿರುದ್ಧ ಮಾರ್ಚ್ 31ರಂದು ಎಫ್‌ಐಆರ್ ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಸಂದೀಪ್ ತುಕಾರಾಂ ಪವಾರ್, ಮಂಗೇಶ್ ಕಮ್ಟೇಕರ್, ಅಕ್ಷಯ್ ಕಾಮ್ಟೇಕರ್ ಮತ್ತು ರಮೇಶ್ ಘಾಗ್ ಎಂದು ಗುರುತಿಸಲಾಗಿದೆ. ಹಲ್ಲಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಈ ನಾಲ್ವರು, ಆ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆ ವಿಡಿಯೋ ಕಣ್ಣಿಗೆ ಬಿದ್ದಿದೆ. ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಬೆಂಗಾಲ್ ಮಾನಿಟರ್’ ಭಾರತೀಯ ಉಪಖಂಡದಲ್ಲಿ ಹಾಗೂ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ಭಾಗಗಳಲ್ಲಿ ಕಂಡುಬರುವ ದೊಡ್ಡ ಹಲ್ಲಿಯಾಗಿದೆ. ಭೂಮಿಯ ಮೇಲೆ ವಾಸಿಸುವ ಈ ಹಲ್ಲಿಯ ಉದ್ದ ಸುಮಾರು 24 ರಿಂದ 69 ಇಂಚುಗಳಷ್ಟಿರುತ್ತದೆ.