ಕನ್ನಡ ಮತ್ತು ಸಂಸ್ಕ್ರತಿ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‍ಲೈನ್ ಮೂಲಕ ನೋಂದಾವಣೆಗೆ ಸೂಚನೆ

Ad Widget ... ..

ಸಮಗ್ರ ನ್ಯೂಸ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿಗಳು/ ಕಲಾವಿದರ ದತ್ತಾಂಶ ಸಂಗ್ರಹ ನೊಂದಣಿಯನ್ನು ಮಾ.31ರಂದು ಆರಂಭಿಸಿದ್ದು, ದತ್ತಾಂಶ ಸಂಗ್ರಹ ನೋಂದಣಿಗೆ ಅವಕಾಶ ನೀಡಲಾಗಿದೆ. ಪ್ರತಿಬಾರಿಯೂ ಕಲಾವಿರ ಮಾಹಿತಿಯನ್ನು ಪಡೆದುಕೊಳ್ಳಲು ಪರಾವಲಂಬಣೆ ಮಾಡಬೇಕಾಗಿರುತ್ತದೆ. ಈ ಕಲಾವಿದರ ದತ್ತಾಂಶ ಸಂಗ್ರಹದ ಪ್ರಕ್ರಿಯೆಯಿಂದ ರಾಜ್ಯದ ಕಲಾವಿದರ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಈ ಅಭಿಯಾನ ಕಲಾವಿದರ ಸಮಗ್ರ ಮಾಹಿತಿ ಪೂರೈಸುವುದರಿಂದ ಇಲಾಖೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.

Ad Widget

ದತ್ತಾಂಶ ಸಂಗ್ರಹ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳು ಹಾಗೂ ಹೊರದೇಶಿಗಳಿಂದಲೂ ಕಲಾವಿದರು ನಮ್ಮನ್ನು ಸಂಪರ್ಕಿಸಿ ಅವರ ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳುವ ಸಮಗ್ರವಾದ ಯೋಜನೆ ಇದಾಗಿರುವುರಿಂದ ಇದು ಒಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಯೋಜನೆಯಿಂದ ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಕಲಾವಿದರುಗಳು ಆನ್‍ಲೈನ್ ಕೊಂಡಿ ಸೇವಾಸಿಂಧು https://sevasindhu.karnataka.gov.in/ ರ ಮೂಲಕ ಸಾಹಿತಿಗಳು/ ಕಲಾವಿದರುಗಳು ತಮ್ಮ ದತ್ತಾಂಶವನ್ನು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ನಾಡಿನ ಅರೆಭಾಷೆ ಕಲಾವಿದರು/ಸಾಹಿತಿಗಳು ಈ ಯೋಜನೆಯಡಿ ತಮ್ಮ ಸಂಪೂರ್ಣ ವಿವರವನ್ನು ನೋಂದಾಯಿಸಲು ಈ ಮೂಲಕ ಕೋರಲಾಗಿದೆ.

Leave a Comment

Your email address will not be published. Required fields are marked *