Ad Widget .

ಹೈದರಾಬಾದ್: ರೈಲು ಹರಿದು ಐವರು ದುರ್ಮರಣ; ಹಲವರಿಗೆ ಗಾಯ

Ad Widget . Ad Widget .

ಸಮಗ್ರ ನ್ಯೂಸ್: ವೇಗವಾಗಿ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲು ಹರಿದು ಐದು ಮಂದಿ ಮೃತಪಟ್ಟು, ಇತರ ಹಲವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

Ad Widget . Ad Widget .

ಜಿ. ಸಿಗದಾಮ್ ಮತ್ತು ಚೀಪುರುಪಲ್ಲಿ ನಿಲ್ದಾಣಗಳ ನಡುವೆ ರಾತ್ರಿ 9ರ ಬಳಿಕ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

“ಕೊಯಮತ್ತೂರು- ಸಿಲ್ಚರ್ ಎಕ್ಸ್ ಪ್ರೆಸ್ ರೈಲು (ನಂ.12515) ಚಲಿಸುತ್ತಿದ್ದ ವೇಳೆ ವಿಶಾಖಪಟ್ಟಣಂ ಪಲಸ ಮೈನ್ ಲೇನ್ ಮಧ್ಯದಲ್ಲಿ ಕೆಲವರು ರೈಲಿನ ಚೈನ್ ಎಳೆದರು. ರೈಲಿನಿಂದ ಕೆಳಕ್ಕಿಳಿದು ರೈಲು ಹಳಿಯಲ್ಲಿ ಮತ್ತೊಂದು ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಹಂತದಲ್ಲಿ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಭುವನೇಶ್ವರ- ಸಿಟಿಎಸ್ ಮುಂಬೈ ಕೊನಾರ್ಕ್ ಎ‌ಕ್ಸ್ ಪ್ರೆಸ್ ರೈಲಿನಡಿ ಸಿಕ್ಕಿಹಾಕಿಕೊಂಡರು ಎಂದು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಉಲ್ಲೇಖಿಸಿ ಅವರು ವಿವರ ನೀಡಿದ್ದಾರೆ.‌

ಐದು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇತರ ಹಲವು ಮಂದಿಗೆ ಗಾಯಗಳಾಗಿವೆ. ಮೃತಪಟ್ಟವರ ವಿವರಗಳು ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *