ಸಮಗ್ರ ನ್ಯೂಸ್: ದೇಶದಲ್ಲಿಯೇ ಬೃಹತ್ ವಿದ್ಯುತ್ ಚಾಲಿತ ವಾಹನಗಳ ಅಗ್ನಿದುರಂತ ಸಂಭವಿಸಿದೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ಎಲೆಕ್ಟ್ರಿಕ್ ಬೈಕ್ ಹೊತ್ತು ಹೊರಟಿದ್ದ ಕಂಟೇನರ್ ಬೆಂಕಿಗೆ ಆಹುತಿಯಾಗಿ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್ ಗಳು ಭಸ್ಮಗೊಂಡಿರುವ ಘಟನೆ ನಡೆದಿದೆ.
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುತ್ತಿರುವ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸುರಕ್ಷತೆ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಯಾಕೆಂದರೆ, ಅಲ್ಲಲ್ಲಿ ಎಲೆಕ್ಟ್ರಿಕ್ ಬೈಕ್ ಗಳು ದಿಢೀರ್ ಬೆಂಕಿಗೆ ಆಹುತಿಯಾಗುತ್ತಿರೋದೆ ಕಾರಣವಾಗಿದೆ.
ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಜಿತೇಂದ್ರ ಎಲೆಕ್ಟ್ರಿಕ್ ವಹಿಕಲ್ಸ್ ಫ್ಯಾಕ್ಟರಿಯಿಂದ 40 ಎಲೆಕ್ಟ್ರಿಕ್ ಬೈಕ್ ಗಳನ್ನು ಹೊತ್ತ ಕಂಟೇನರ್, ಬೆಂಗಳೂರಿನತ್ತ ಪ್ರಯಾಣ ಆರಂಭಿಸಿತ್ತು. ಹೀಗೆ ಹೊರಟ ಕೆಲವೇ ಕ್ಷಣದಲ್ಲಿ ಕಂಟೈನರ್ ಒಳಗಡೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, 20 ಬೈಕ್ ಗಳು ಸುಟ್ಟು ಭಸ್ಮವಾಗಿರೋದಾಗಿ ಕಂಪನಿ ತಿಳಿಸಿದೆ. ವಿದ್ಯುತ್ ಚಾಲಿತ ವಾಹನಗಳ ಸುರಕ್ಷತೆ ಬಗ್ಗೆ ಇದರಿಂದ ಅನುಮಾನ ಮತ್ತಷ್ಟು ಬಲಪಡೆದಂತಾಗಿದೆ.