ಸಂತೋಷ್ ಆತ್ಮಹತ್ಯೆ ಹಿನ್ನಲೆ| ಅರುಣ್ ಸಿಂಗ್ ರಿಂದ ಹೈಕಮಾಂಡ್ ಗೆ ಗ್ರೌಂಡ್ ರಿಪೋರ್ಟ್; ಸಚಿವ ಈಶ್ವರಪ್ಪ ‌ತಲೆದಂಡ!?

ಸಮಗ್ರ‌ ನ್ಯೂಸ್: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಹೈಕಮಾಂಡ್ ಗೆ ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಯಾವುದೇ ಕ್ಷಣದಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

Ad Widget ... ..

ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್ ಅವರು ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ವಿರುದ್ಧದ ಡೆತ್ ನೋಟ್ ಮತ್ತು ಕಾಂಗ್ರೆಸ್ ಡೆಡ್ ಲೈನ್ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡುವುದು ಪಕ್ಕಾ ಆಗಿದೆ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ಕಿಕ್ ಔಟ್ ಮಾಡುವುದು ಖಚಿತವಾಗಿದೆ.

Ad Widget

ಡಿವೈಎಸ್ ಪಿ ಗಣಪತಿ ಕೇಸ್ ನಲ್ಲೂ ಇದೇ ವಿಧದಲ್ಲಿ ಆಗಿತ್ತು. ಕಾಂಟ್ರಾಕ್ಟರ್ ಈಶ್ವರಪ್ಪ ಅವರ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅಸ್ತ್ರ ಸಿಗದಂತೆ ಮಾಡಲು ಈಶ್ವರಪ್ಪ ಗೆ ರಾಜೀನಾಮೆ ನೀಡಲು ಸೂಚಿಸುವ ಸಾಧ್ಯತೆ ಹೆಚ್ಚಿದೆ.

Leave a Comment

Your email address will not be published. Required fields are marked *