Ad Widget .

ಉತ್ತರಾಖಂಡ : ಭೀಕರ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ವನ್ಯಸಂಕುಲ ನಾಶ

Ad Widget . Ad Widget .

ಸಮಗ್ರ ನ್ಯೂಸ್: ಉತ್ತರಾಖಂಡ್ ನ ತೆಹ್ರಿ ಜಿಲ್ಲೆಯ ತಿವಾರ್ಗಾಂವ್ ಮೇಲಿನ ಕಾಡುಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅರಣ್ಯ ಸಂಪತ್ತು ನಾಶವಾಗಿದೆ.

Ad Widget . Ad Widget .

ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆಯ ವೇಳೆಗೆ ಇಡೀ ಕಾಡನ್ನು ಆವರಿಸಿದೆ ಎಂದು ತಿಳಿದುಬಂದಿದೆ.

ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ‌ ಕಾರಣ ಕಾಳ್ಗಿಚ್ಚು ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅರಣ್ಯ ರೇಂಜರ್ ಆಶಿಶ್ ಡಿಮ್ರಿ ನೇತೃತ್ವದಲ್ಲಿ ಬೆಂಕಿ ನಂದಿಸಲು ಯತ್ನಿಸಿದ್ದು, ಈ ವೇಳೆ ಹತ್ತು ಹೆಕ್ಟೇರ್ ಅರಣ್ಯ ಭೂಮಿ ಬೆಂಕಿಯಲ್ಲಿ ನಾಶವಾಗಿದೆ, ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಸುಟ್ಟು ಕರಕಲಾದವು ಎಂದು ಶ್ರೀ ಡಿಮ್ರಿ ಹೇಳಿದರು. ಕಾಡ್ಗಿಚ್ಚಿನ ಸಂದರ್ಭದಲ್ಲಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ದಿಮ್ರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *