Ad Widget .

17ರ ಯುವತಿಯ ಮೇಲೆ‌ ಕೆಲಸದ ಆಮಿಷ ಒಡ್ಡಿ‌ ಒಂದೂವರೆ ವರ್ಷದಿಂದ ನಿರಂತರ ಅತ್ಯಾಚಾರ| 15 ಮಂದಿಯಿಂದ ಅಮಾನವೀಯ ದೌರ್ಜನ್ಯ, ಕೆಲ ಆರೋಪಿಗಳ ಬಂಧನ

Ad Widget . Ad Widget .

ಸಮಗ್ರ ನ್ಯೂಸ್: ಕೆಲಸ ಕೊಡಿಸುವುದಾಗಿ ನಂಬಿಸಿ 17 ವರ್ಷದ ಅಪ್ರಾಪ್ತೆಯ ಮೇಲೆ ಒಂದೂವರೆ ವರ್ಷ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಒಟ್ಟು 15 ಮಂದಿ ಹುಡುಗಿಯ ಮೇಲೆ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.

Ad Widget . Ad Widget .

ಸಂತ್ರಸ್ತೆ ಬಡ ಕುಟುಂಬದವಳಾಗಿದ್ದು, ಇದೀಗ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಬಂಧಿತರನ್ನು ಕುಮಾರಮಂಗಳಂ ಮೂಲದ ಬ್ರೋಕರ್​​ ರಘು (ಬೇಬಿ 51), ವೆಲ್ಲರಮ್​ಕುಲು ಮೂಲದ ಕೆಎಸ್​ಇಬಿ ಉದ್ಯೋಗಿ ವಲಂಪಿಲಿಲ್ ಸಜೀವ್​ (55), ಕೊಟ್ಟಾಯಂ, ರಾಮಪುರಂನ ಮನಿಯಾದುಪರದ ಕಲ್ಲುರ್ಕಾಡು ಕೊಟ್ಟೂರು ಥಾಂಕಚನ್​ (56), ವಲ್ಲಿಯಜರಾಮ್​, ಪೊಕ್ಕಲಥು ವೀಡುವಿನ ಬಿನು (43), ಪಿನಾಕಟ್ಟು ವೀಡುವಿನ ಥಾಮಸ್​ ಚಾಕೋ (27) ಮಲಪ್ಪುರಂ ಮೂಲದ ಜಾನ್​ (50) ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಹೇಳುವಂತೆ 15 ಮಂದಿ ದೌರ್ಜನ್ಯ ಎಸಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 15 ವರ್ಷ ವಯಸ್ಸಿನಿಂದಲೂ ಹುಡುಗಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆಗೆ ತಂದೆ ಇಲ್ಲ. ಆಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಬ್ರೋಕರ್​ ರಘು 2020ರಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.

ರಘು ಮಾತನ್ನು ನಂಬಿದ ಸಂತ್ರಸ್ತೆ ಆತನನ್ನು ಭೇಟಿಯಾಗಲು ಬಂದಾಗ ಮೊದಲು ಆಕೆಯ ಮೇಲೆ ಆತ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ಕೆಲವರ ಬಳಿ ಭಾರೀ ಮೊತ್ತದ ಹಣ ಸಂಗ್ರಹಿಸಿಕೊಂಡು ಸಂತ್ರಸ್ತೆಯನ್ನು ಅವರ ಬಳಿ ಬಿಟ್ಟಿದ್ದಾನೆ. ಇದು ಹೀಗೆ ಕಳೆದ ಎರಡು ತಿಂಗಳವರೆಗೂ ಮುಂದುವರಿದಿತ್ತು. ಹೊಟ್ಟೆ ನೋವಿನಿಂದ ಸಂತ್ರಸ್ತೆ ಆಸ್ಪತ್ರೆಗೆ ದಾಖಲಾದಾಗ ತಾನು ಗರ್ಭಿಣಿ ಆಗಿರುವುದು ಆಕೆಗೆ ಗೊತ್ತಾಗಿದೆ.

ಇದಾದ ಬಳಿಕ ಆಸ್ಪತ್ರೆಯ ವೈದ್ಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ಮುಟ್ಟಿತು. ಆಸ್ಪತ್ರೆಗೆ ಧಾವಿಸಿದ ಅಧಿಕಾರಿಗಳು ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡ ಬಳಿಕ ಕಾರ್ಯಾಚರಣೆಗೆ ಇಳಿದು 6 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *