Ad Widget .

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷಗಾನ ರಂಗದ ತೆಂಕುತಿಟ್ಟಿನ ಅಗ್ರಗಣ್ಯ ಬಲಿಪ ಪರಂಪರೆಯ ಕೊಂಡಿಯೊಂದು ಕಳಚಿ ಹೋಗಿದ್ದು, ಭಾಗವತಿಕೆಯಲ್ಲಿ ಹೆಸರಾಗಿದ್ದ ಬಲಿಪ ಪ್ರಸಾದ ಭಾಗವತರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ.

Ad Widget . Ad Widget .

ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

Ad Widget . Ad Widget .

ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತನ್ನ ಪರಂಪರೆಯ ವಿಶಿಷ್ಟ ಕಂಚಿನ ಕಂಠದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಪ್ರಸಾದ್ ಅವರು ತಂದೆ ಖ್ಯಾತ ಭಾಗವತ ನಾರಾಯಣ ಬಲಿಪ , ಪತ್ನಿ, ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಸಾದ ಬಲಿಪರು ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಏರು ಪದ್ಯಗಳ ಮೂಲಕ ಬಲಿಪ ಪರಂಪರೆಯ ಶೈಲಿಯ ಪ್ರತಿನಿಧಿಯಾಗಿ ಭಾಗವತನ ಸ್ಥಾನ ತುಂಬಿದ್ದರು.

ಬಲಿಪರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *