Ad Widget .

ತಾಯಿಯಾಗ್ತಿದಾರೆ ನಟಿ ಪ್ರಣೀತಾ| ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

Ad Widget . Ad Widget .

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಸುಭಾಷ್ ತಾಯಿಯಾಗುತ್ತಿದ್ದಾರೆ.

Ad Widget . Ad Widget .

ಗರ್ಭಿಣಿ ಆಗಿರುವ ಪ್ರಣೀತಾ, ಈ ಸುದ್ದಿಯನ್ನ ವಿಭಿನ್ನವಾಗಿ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಪತಿ ಹಾಗೂ ಉದ್ಯಮಿ ನಿತಿನ್ ರಾಜು ಜತೆ ಇರುವ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿ ತಾಯಿ ಆಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಒಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್​ ಪ್ರಗ್ನೆಂಟ್​ ಕಿಟ್​ ಹಿಡಿದಿದ್ದರೆ, ಇನ್ನೊಂದು ಫೋಟೋದಲ್ಲಿ ನಿತಿನ್​, ಪ್ರಣಿತಾರನ್ನು ಎತ್ತಿಕೊಂಡಿದ್ದು, ಪ್ರಣೀತಾ ಸ್ಕ್ಯಾನ್​ ರಿಪೋರ್ಟ್​ ಅನ್ನು ಕ್ಯಾಮೆರಾಗೆ ಪ್ರದರ್ಶಿಸುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸದ್ಯ ಪ್ರಣೀತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಣೀತಾ ಗುಟ್ಟಾಗಿ ಮದುವೆಯಾಗಿ ಅಭಿಮಾನಿಗಳ ಕ್ಷಮೆ ಕೋರಿದ್ದರು.

Leave a Comment

Your email address will not be published. Required fields are marked *