ಸಮಗ್ರ ನ್ಯೂಸ್: ಕಲಬುರ್ಗಿಯ ಕೇಂದ್ರಿಯ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಬಳಿ ಇರುವ ಲಕ್ಷ್ಮಿ ದೇವಸ್ಥಾನದಲ್ಲಿ ರಾಮ ನವಮಿಯ ಆಚರಣೆಗೆ ಸೇರಿದ್ದ ವೇಳೆ ಹಲ್ಲೆ ನಡೆಸಿದ್ದು, ಖಂಡನೀಯ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಹೇಳಿದ್ದಾರೆ.
ವಿದ್ಯಾರ್ಥಿಗಳು ದೇವಸ್ಥಾದಲ್ಲಿ ನಡೆದ ರಾಮನವಮಿಯ ಆಚರಣೆಯ ನಂತರ ಹಿಂದಿರುಗುವ ಸಂಧರ್ಭದಲ್ಲಿ 4 ವಿದ್ಯಾರ್ಥಿಗಳ ತಂಡವೊಂದು ರಾಮ ನವಮಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ , ವಿದ್ಯಾರ್ಥಿಯ ಬಟ್ಟೆಯನ್ನು ಹರಿದು ಹಲ್ಲೆಯನ್ನು ನಡೆಸಿದ್ದಾರೆ ಮತ್ತು ವಿದ್ಯಾರ್ಥಿಯನ್ನು ಅಪಹರಿಸುವಂತಹ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಿರುತ್ತಾರೆ .
ಈ ಘಟನೆಯು ವ್ಯವಸ್ಥಿತ ಸಂಚಿನಿಂದ ನಡೆದಿರುವ ರೀತಿಯಾಗಿ ಕಂಡು ಬರುತ್ತಿದೆ. ಈ ರೀತಿಯಾಗಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ನಡುವೆ ವೈಷಮ್ಯ ಬಿತ್ತುವಂತ ಕೆಲಸವನ್ನು ಮಾಡಿ ಭಯದ ವಾತಾವರಣವನ್ನು ವಿಶ್ವ ವಿದ್ಯಾನಿಲಯದಲ್ಲಿ ಸೃಷ್ಟಿಸುವಂತ ಕೆಲಸವನ್ನು ಗೂಂಡಾ ವರ್ತನೆಯ ಈ ವಿದ್ಯಾರ್ಥಿಗಳು ಮಾಡಿರುತ್ತಾರೆ .
ಈ ಘಟನೆಯನ್ನು ವಿದ್ಯಾರ್ಥಿ ಪರಿಷತ್ ತೀರ್ವವಾಗಿ ಖಂಡಿಸುತ್ತದೆ. ಈ ಗೂಂಡಾ ವರ್ತನೆ ತೋರಿರುವ ವಿದ್ಯಾರ್ಥಿಗಳ ವಿರುದ್ಧ ಕೂಡಲೇ ವಿಶ್ವ ವಿದ್ಯಾಲಯವು ಸೂಕ್ತವಾದ ಶಿಸ್ತು ಕ್ರಮವನ್ನು ತೆಗೆದುಕೊಳ್ಳ ಬೇಕು ಹಾಗೂ ಕಾನೂನು ಕ್ರಮಕ್ಕಾಗಿ ಮೊಕದ್ದಮೆಯನ್ನು ಹೂಡ ಬೇಕು ಎಂದು ಅವರು ಆಗ್ರಹಿಸಿದ್ದಾರೆ.