Ad Widget .

ದ್ವಾದಶ ರಾಶಿಗಳ. ವಾರಭವಿಷ್ಯ

ಮೇಷ ರಾಶಿ: ವೃತ್ತಿರಂಗದ ಬಗ್ಗೆ ಸಂತೋಷವಿರುತ್ತದೆ. ಗುತ್ತಿಗೆ ವ್ಯವಹಾರಸ್ತರಿಗೆ ಹಣದ ಹರಿವು ಚೆನ್ನಾಗಿರುತ್ತದೆ.ನೆರೆಹೊರೆಯವರ ಜೊತೆ ನಿಷ್ಠುರವಾಗಿ ಅವರಿಂದ ದೂರವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಅಂತ ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಲಲಿತಕಲೆ ಪರಿಣಿತರಿಗೆ ಪ್ರದರ್ಶನ ಮಾಡುವ ಅವಕಾಶಗಳು ದೊರೆಯಲು ಆರಂಭಿಸುತ್ತವೆ. ನಿಮ್ಮ ವಿಶ್ವಾಸಿಗಳಿಗೆ ಅನಿವಾರ್ಯವಾಗಿ ಧನಸಹಾಯ ಮಾಡಬೇಕಾಗುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕಣ್ಣಿನ ಸಮಸ್ಯೆ ಕಾಡಬಹುದು.

Ad Widget . Ad Widget .

ವೃಷಭ ರಾಶಿ: ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಅನಿಶ್ಚಿತತೆಯಿಂದ ವ್ಯವಹಾರಗಳಲ್ಲಿ ಲಾಭ ಕಡಿಮೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿನ ಮುನ್ನಡೆ ಇರುತ್ತದೆ. ದೈಹಿಕ ಕೆಲಸಗಳನ್ನು ಮಾಡುವ ಕೆಲವರಿಗೆ ಕೆಲಸದೊತ್ತಡ ಕಡಿಮೆಯಾಗುವುದು. ರಾಜಕೀಯ ವ್ಯಕ್ತಿಗಳಿಗೆ ಕಿರಿಕಿರಿ. ಉದರ ಸಂಬಂಧಿ ಕಾಯಿಲೆಗಳು ಕಾಣಿಸುವ ಲಕ್ಷಣ. ಹಣದ ಹರಿವು ನಿಮ್ಮ ಅಪೇಕ್ಷೆಯಂತೆ ಇರುತ್ತದೆ. ಪಿತ್ರಾರ್ಜಿತ ಸ್ವತ್ತುಗಳು ಸಿಗುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ಇರುತ್ತದೆ. ದಿನಸಿ, ಎಣ್ಣೆಕಾಳುಗಳನ್ನು ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ತಂದೆಯೊಂದಿಗೆ ಸಂಬಂಧ ಹೆಚ್ಚುತ್ತದೆ.

Ad Widget . Ad Widget .

ಮಿಥುನ ರಾಶಿ: ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಕಂಡುಬಂದರೂ ಅಂತಹ ತೊಂದರೆಯಿರುವುದಿಲ್ಲ. ನಿಶ್ಚಿತ ಆದಾಯಕ್ಕೆ ಕೊರತೆಯಿರುವುದಿಲ್ಲ. ಮಹಿಳೆಯರ ಮನೋಭಿಲಾಷೆಗಳು ಈಡೇರುವ ಸಂದರ್ಭವಿದೆ. ಬೇರೆಯವರ ವಾದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭವಿದೆ, ಎಚ್ಚರವಹಿಸಿ ಮಾತನಾಡಿರಿ. ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ನೊಂದಣಿ ಕಾರ್ಯಗಳು ಈಗ ಪೂರ್ಣಗೊಳ್ಳುತ್ತವೆ. ಯೋಧರಿಗೆ ನಿಮ್ಮ ಸಂಬಂಧಿಕರ ಬಳಿ ಹೆಚ್ಚಿನ ಗೌರವ ದೊರೆಯುತ್ತದೆ. ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಸಂಸಾರದಲ್ಲಿ ಮುಸುಕಿನ ಗುದ್ದಾಟ ಇರುತ್ತದೆ, ತಾಳ್ಮೆಯಿಂದ ಪರಿಹರಿಸಿಕೊಳ್ಳಿರಿ. ವಿದೇಶಿ ಹಣ ಬದಲಾವಣೆ ಮಾಡುವವರಿಗೆ ಲಾಭವಿರುತ್ತದೆ.

ಕಟಕ ರಾಶಿ: ಸ್ವಲ್ಪಮಟ್ಟಿನ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತವೆ. ನಿರೀಕ್ಷಿತ ಮೂಲಗಳಿಂದ ಹಣದ ಒಳಹರಿವು ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು. ವ್ಯವಹಾರಗಳಲ್ಲಿ ನಿಮ್ಮ ಶ್ರಮ ಫಲ ನೀಡುವುದು. ಬರಬೇಕಾಗಿದ್ದ ಬಾಕಿ ಹಣದಲ್ಲಿ ಸ್ವಲ್ಪ ಹಣ ಬರುತ್ತದೆ. ಎಣ್ಣೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಸುಗಂಧದ್ರವ್ಯಗಳನ್ನು ಮಾರಾಟ ಮಾಡುವವರ ವ್ಯಾಪಾರದಲ್ಲಿ ವಿಸ್ತರಣೆಯಾಗುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಮನಸ್ಸಿರುತ್ತದೆ. ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ಸರ್ಕಾರಿ ಅಧಿಕಾರಿಗಳಿಂದ ಕಾನೂನು ರೀತಿಯ ತೊಡಕುಗಳು ಎದುರಾಗಬಹುದು. ಕೃಷಿಕರ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಸಂತೋಷವಾಗುತ್ತದೆ.

ಸಿಂಹ ರಾಶಿ: ನಿಮ್ಮ ಅಭಿವೃದ್ಧಿಗೆ ಪೂರಕವಾದ ಅವಕಾಶಗಳು ಒದಗಿಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಆರ್ಥಿಕ ತೊಂದರೆಗಳಿಂದ ಸ್ವಲ್ಪಮುಕ್ತಿಯನ್ನು ಕಾಣಬಹುದು. ಕೋರ್ಟ್ ಕಚೇರಿಯ ವ್ಯಾಜ್ಯಗಳು ಪರಿಹಾರದತ್ತ ಸಾಗಿ ನಿಮಗೆ ಅನುಕೂಲವಾಗುತ್ತದೆ. ವಸ್ತ್ರಾಭರಣಗಳ ಖರೀದಿಯನ್ನು ಮಾಡಲು ಮುಂದಾಗುವಿರಿ. ಸಹೋದ್ಯೋಗಿಗಳ ಮನಮೆಚ್ಚುವಂತೆ ಮಾತನಾಡಿ ಕೆಲಸ ಸಾಧಿಸುವಿರಿ. ಮನಸ್ಸಿಗೆ ಉಲ್ಲಾಸ ತರುವ ವಾರ್ತೆಯನ್ನು ಕೇಳುವಿರಿ. ಉದ್ದಿಮೆಗಳನ್ನು ನಡೆಸುತ್ತಿರುವವರಿಗೆ ಇದ್ದ ಕಾನೂನಿನ ತೊಡಕುಗಳು ನಿವಾರಣೆಯಾಗುತ್ತವೆ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿರುವವರೆಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚು. ಕಂಪ್ಯೂಟರ್ ತಜ್ಞರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಹೊಸ ಸಂಬಂಧಿಗಳಿಂದ ಹೊಸ ಯೋಜನೆಗಳಿಗೆ ಅನುಕೂಲ ದೊರೆಯುವುದು ಕಷ್ಟ. ಕುಟುಂಬದಲ್ಲಿ ಎಲ್ಲರ ಬೆಂಬಲಗಳಿಸಿ ಲಾಭ ಪಡೆಯಲು ಯತ್ನ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ಅಷ್ಟೇನೂ ಹಿತಕರವಾಗಿ ಇರುವುದಿಲ್ಲ. ಮಹಿಳಾ ಸಂಘಗಳಿಂದ ಸಾಲಗಳು ಸಿಗುವ ಸಾಧ್ಯತೆ ಇದೆ. ಶ್ವಾಸಕೋಶ ಸಂಬಂಧಿತ ಕಾಯಿಲೆ ಇರುವವರು ಆಸ್ಪತ್ರೆಯನ್ನು ಸೇರುವ ಸಂಭವವಿದೆ. ಸಂಗಾತಿಯ ಆದಾಯವು ಅಲ್ಪಮಟ್ಟದ ಏರಿಕೆಯನ್ನು ಕಾಣಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರ ವೇತನದಲ್ಲಿ ಏರಿಕೆಯನ್ನು ಕಾಣಬಹುದು. ವೃತ್ತಿ ಜೀವನದಲ್ಲಿ ಇರಿಸುಮುರಿಸು ಉಂಟಾಗುವ ಲಕ್ಷಣಗಳಿವೆ.

ತುಲಾ ರಾಶಿ: ಅವಿವಾಹಿತರಿಗೆ ವಿವಾಹ ಮಾತುಕತೆಗಳು ನಡೆಯುವ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿ ಜನಮನ್ನಣೆ ದೊರೆತರೂ ನಿಮ್ಮ ಬಗ್ಗೆ ಸಣ್ಣ ಮಾತುಗಳು ಕೇಳಿಬರುತ್ತವೆ. ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಕೊಡುವವರಿಗೆ ಬೇಡಿಕೆ ಬರಲಾರಂಭಿಸುತ್ತದೆ. ಮಕ್ಕಳ ವಿಷಯದಲ್ಲಿ ಸ್ವಲ್ಪಮಟ್ಟಿನ ವ್ಯಥೆ ಉಂಟಾಗುತ್ತದೆ. ಸ್ನೇಹಿತರೊಂದಿಗೆ ಆರ್ಥಿಕ ವಿಷಯಗಳಲ್ಲಿ ವಿರಸ ಬರಬಹುದು. ವಿರೋಧಿಗಳನ್ನು ದೂರಸರಿಸಲು ಒಳ ತಂತ್ರಗಳನ್ನು ಬಳಸುವಿರಿ. ಹಿರಿಯರ ಸಲಹೆಗಳಿಂದ ಬರಲಿರುವ ಗಂಡಾಂತರಗಳಿಂದ ಪಾರಾಗುವಿರಿ. ಹಣದ ಒಳಹರಿವು ನಿರೀಕ್ಷೆಯಷ್ಟು ಇಲ್ಲದೆ ಕಷ್ಟವೆನಿಸಬಹುದು. ಆಸ್ತಿ ವಿಷಯಗಳಲ್ಲಿ ಹೊಸ ಸಮಸ್ಯೆಗಳು ತಲೆದೋರಬಹುದು. ವೃತ್ತಿ ಕ್ಷೇತ್ರದಲ್ಲಿ ಇದ್ದ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಕಾಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳು ದೊರೆತು ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ. ಸರ್ಕಾರಿ ಅಧಿಕಾರಿಗಳಿಗೆ ವೃತ್ತಿಯಲ್ಲಿ ಇದ್ದ ಕಿರಿಕಿರಿಗಳು ಕಡಿಮೆಯಾಗುತ್ತವೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುವಿರಿ. ಸಗಟು ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಲಾಭವಿರುತ್ತದೆ. ಬಂಧುಗಳಿಂದ ಎದುರಾಗಬಹುದಾಗಿದ್ದ ವಿರೋಧಗಳು ಸ್ವಲ್ಪಮಟ್ಟಿಗೆ ತಣ್ಣಗಾಗುತ್ತವೆ. ಸೌಂದರ್ಯವರ್ಧಕಗಳನ್ನು ತಯಾರು ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ.

ಧನಸ್ಸು ರಾಶಿ: ಕೈಗೆತ್ತಿಕೊಂಡ ಕೆಲಸಗಳು ನಿಮ್ಮ ಸತತ ಪ್ರಯತ್ನದಿಂದಾಗಿ ಯಶಸ್ವಿಯಾಗಲಿವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವಿರಿ. ಗೃಹ ನಿರ್ಮಾಣ ಅಥವಾ ನವೀಕರಣವನ್ನು ಕೈಗೆತ್ತಿಕೊಳ್ಳುವ ಸಂದರ್ಭವಿದೆ. ಗಣ್ಯ ವ್ಯಕ್ತಿಗಳಿಗೆ ಸಹಕಾರ ನೀಡಿ ಅವರ ಆತ್ಮೀಯತೆಯನ್ನು ಗಳಿಸುವಿರಿ. ಹಣದ ಒಳ ಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಕುಸರಿ ಕಲೆಗಳನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡುವುದು ಅಗತ್ಯ. ನರದೌರ್ಬಲ್ಯ ಇರುವವರಿಗೆ ಸ್ವಲ್ಪ ಸುಧಾರಣೆ ಆಗುವ ಸಾಧ್ಯತೆ ಇದೆ.

ಮಕರ ರಾಶಿ: ಸಮಾಧಾನದಿಂದ ವ್ಯವಹಾರ ಮಾಡುವುದರಿಂದ ಎಲ್ಲ ಕೆಲಸಗಳು ಕೈಗೂಡುತ್ತವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆಯಾದರೂ ನಂತರ ಪೂರ್ಣಗೊಳ್ಳುತ್ತದೆ. ಅನವಶ್ಯಕ ವ್ಯವಹಾರಗಳಲ್ಲಿ ಹಣ ತೊಡಗಿಸುವುದು ಬೇಡ. ಹೊಸ ಯೋಜನೆಯೊಂದನ್ನು ನಿರೂಪಿಸುವಲ್ಲಿ ಬಹಳ ಯಶಸ್ಸನ್ನು ಕಾಣುವಿರಿ. ಸ್ನೇಹಿತರೊಂದಿಗೆ ವ್ಯವಹಾರಕ್ಕೆ ಸಂಬಂಧವಿರುವ ಹಲವಾರು ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ವ್ಯವಸಾಯ ಕ್ಷೇತ್ರದಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಔಷಧಿ ವಿತರಕರಿಗೆ ಹೊಸ ರೀತಿಯ ಔಷಧಿಗಳನ್ನು ವಿತರಣೆ ಮಾಡಲು ಆದೇಶಗಳು ದೊರೆಯುವ ಸಂದರ್ಭವಿದೆ. ಚಿನ್ನ, ಬೆಳ್ಳಿ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಕುಂಭ ರಾಶಿ: ಸಾಹಸ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಸಹಾಯ ದೊರೆತು ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ಆರ್ಥಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೊಡುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಹೆಸರು ಬರುತ್ತದೆ. ವೈದ್ಯರಿಗೆ ಹೆಚ್ಚಿನ ರೀತಿಯ ಸಂಪಾದನೆ ನಿರೀಕ್ಷೆ ಮಾಡಬಹುದು. ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ, ಸ್ವಲ್ಪ ಎಚ್ಚರವಹಿಸಿರಿ. ರಾಜಕೀಯ ನಾಯಕರುಗಳ ತಿಕ್ಕಾಟದಲ್ಲಿ ನೀವು ಮೇಲೆ ಬರುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಸಂಪಾದನೆ ಇರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಬರುತ್ತವೆ. ಆರೋಗ್ಯದ ಕಡೆ ನಿಗಾ ವಹಿಸಿರಿ.

ಮೀನ ರಾಶಿ: ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ಸಾಮಾಜಿಕ ಕಾರ್ಯಕರ್ತರುಗಳಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ಮತ್ತು ಜನ ಸಹಾಯ ದೊರೆಯುತ್ತದೆ. ವ್ಯವಹಾರದಲ್ಲಿ ಇತರರ ವಿಷಯದಲ್ಲಿ ವಿನಾಕಾರಣ ಅಸಹನೆಯನ್ನು ತೋರಿಸುವುದರಿಂದ ನಿಮಗೆ ಸಿಗಬೇಕಾಗಿದ್ದ ಲಾಭ ಕಡಿಮೆಯಾಗುತ್ತದೆ. ಪ್ರಮುಖ ಸಭೆಯೊಂದರಲ್ಲಿ ವಿಷಯ ಮಂಡನೆಗೆ ಅವಕಾಶ ದೊರೆಯುತ್ತದೆ. ಬಹಳ ಹಿಂದೆ ಕಳೆದು ಹೋಗಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ. ಅತಿಯಾದ ಆತ್ಮ ಗೌರವದಿಂದ ಜನರನ್ನು ದೂರ ಮಾಡಿಕೊಳ್ಳುವಿರಿ. ಹಣದ ಒಳಹರಿವು ನಿಮಗೆ ತೃಪ್ತಿಯಾಗುವಷ್ಟು ಇರುತ್ತದೆ. ಸ್ವಂತ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅತಿ ಅಗತ್ಯ.

Leave a Comment

Your email address will not be published. Required fields are marked *