Ad Widget .

ಮಳೆ ಅನಾಹುತ; ಸಿಡಿಲಿಗೆ ಯುವಕ ಬಲಿ, ಎತ್ತುಗಳು ಆಹುತಿ

ಸಮಗ್ರ ನ್ಯೂಸ್: ಮಳೆ ಅನಾಹುತದಲ್ಲಿ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂಕನೇರಿ ಗ್ರಾಮದಲ್ಲಿ ನಡೆದಿದೆ. ನಾಗರಾಜ (22) ಮೃತಪಟ್ಟವರು. ಶೇಂಗಾ ಬೆಳೆಯ ಬಣವೆಗೆ ತಾಡಪಲ್ ಹೊದಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

Ad Widget . Ad Widget .

ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಅಲ್ಲದೇ, ಗಾಳಿ ಮಳೆಗೆ ಮನೆ ಪತ್ರಾಸ್​ಗಳು ಹಾರಿ ಹೋಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ವಿಜಯಪುರ ನಗರ, ಆಲಮಟ್ಟಿ, ತಾಳಿಕೋಟೆ ಸಿಂದಗಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಸಂಭವಿಸಿದ್ದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆ ನೆಲಕಚ್ಚಿದ್ದವು.‌

Ad Widget . Ad Widget .

Leave a Comment

Your email address will not be published. Required fields are marked *