Ad Widget .

“ಇಮ್ರಾನ್ ಒಬ್ಬ ಹುಚ್ಚ; ಭಾರತದೊಂದಿಗೆ ಅಷ್ಟು ಪ್ರೀತಿಯಿದ್ದರೆ ಅಲ್ಲಿಗೇ ಹೋಗಲಿ” – ಮರಿಯಂ ನವಾಜ್

Ad Widget . Ad Widget .

ಸಮಗ್ರ ನ್ಯೂಸ್: ಭಾರತವನ್ನು ಬಹುವಾಗಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ವಿರೋಧ ಪಕ್ಷ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಉಪಾಧ್ಯಕ್ಷೆ ಮರಿಯಂ ನವಾಜ್‌ ಹರಿಹಾಯ್ದಿದ್ದಾರೆ. ಭಾರತವು ಇಮ್ರಾನ್‌ಗೆ ಅಷ್ಟೊಂದು ಇಷ್ಟ ಎಂದಾದರೆ ಅವರು ಅಲ್ಲಿಗೇ ಹೋಗಲಿ ಎಂದಿದ್ದಾರೆ.

Ad Widget . Ad Widget .

ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಭಾರತದ ಯಾವ ಪ್ರಧಾನಿಯೂ ಸಂವಿಧಾನವನ್ನು ಉಲ್ಲಂಘಿಸಿದ ಉದಾಹರಣೆ ಇಲ್ಲ. ಇದನ್ನು ಇಮ್ರಾನ್‌ ಅವರೂ ಅನುಸರಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಮಗಳು ಮರಿಯಂ ಹೇಳಿದ್ದಾರೆ.

‘ಅತ್ಯಂತ ಹೆಮ್ಮೆಯ ಭಾವವನ್ನು ಹೊಂದಿರುವ ದೇಶ ಭಾರತ’ ಎಂದು ಇಮ್ರಾನ್‌ ಹೇಳಿದ್ದಾರೆ. ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಇಮ್ರಾನ್‌ ಅವರು ಶುಕ್ರವಾರ ಮಾತನಾಡಿದ್ದರು. ತಾವು ಭಾರತ ವಿರೋಧಿ ಅಲ್ಲ ಮತ್ತು ಭಾರತದಲ್ಲಿ ತಮಗೆ ದೊಡ್ಡ‌ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದರು.

‘ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಳ್ಳುವಂತೆ ಆ ದೇಶವನ್ನು ಯಾವುದೇ ಸೂಪರ್‌ ಪವರ್ ಕೂಡ ಬಲವಂತ ಮಾಡಲು ಸಾಧ್ಯವಿಲ್ಲ. ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಲಾಗಿದ್ದರೂ ಭಾರತವು ಆ ದೇಶದಿಂದ ತೈಲ ಖರೀದಿ ಮಾಡುತ್ತಿದೆ. ಸಾರ್ವಭೌಮ ದೇಶವಾಗಿರುವ ಭಾರತವು ಹೀಗೆಯೇ ಮಾಡಬೇಕು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಎರಡೂ ದೇಶಗಳು ಒಂದೇ ಬಾರಿ ಸ್ವಾತಂತ್ರ್ಯ ಪಡೆದುಕೊಂಡವು. ಐರೋಪ್ಯ ಒಕ್ಕೂಟದ ರಾಯಭಾರಿಗಳು ಇಲ್ಲಿ ಹೇಳಿದ್ದನ್ನು ಭಾರತದಲ್ಲಿ ಹೇಳಲು ಸಾಧ್ಯವೇ?’ ಎಂದು ಇಮ್ರಾನ್‌ ಹೇಳಿದ್ದಾರೆ.

‘ತಲೆ ಸರಿ ಇಲ್ಲದ ವ್ಯಕ್ತಿಯು ಇಡೀ ದೇಶವನ್ನು ಧ್ವಂಸ ಮಾಡಲು ಅವಕಾಶ ಕೊಡಬಾರದು. ಅವರನ್ನು ಪ್ರಧಾನಿ ಅಥವಾ ಮಾಜಿ ಪ್ರಧಾನಿ ಎಂದೂ ಪರಿಗಣಿಸಬಾರದು. ತಮ್ಮ ಮುಖ ರಕ್ಷಿಸಿಕೊಳ್ಳಲು ಇಡೀ ದೇಶವನ್ನು ಒತ್ತೆ ಇರಿಸಿಕೊಂಡಿರುವ ಅವರನ್ನು ಹುಚ್ಚ ಎಂದು ಮಾತ್ರ ಪರಿಗಣಿಸಬೇಕು’ ಎಂದು ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *