Ad Widget .

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ಬೆಂಗಳೂರಿನ ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

Ad Widget . Ad Widget . Ad Widget .

ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದೇನೆ. ನಿನ್ನೆ ಡಿಜಿ, ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಇಂದು ನಗರ ಪೊಲೀಸ್ ಆಯುಕ್ತರು ಸಿಐಡಿಗೆ ಚಂದ್ರು ಹತ್ಯೆ ಕೇಸ್ ಹಸ್ತಾಂತರ ಮಾಡಲಿದ್ದಾರೆ.ಆರೋಪ ಪ್ರತ್ಯಾರೋಪ ಏನೇ ಇರಲಿ ಸತ್ಯ ಹೊರಬರಲೇಬೇಕು ಎಂದು ಹೇಳಿದ್ದಾರೆ.

ಏ.5ರಂದು ಜೆಜೆ ನಗರದಲ್ಲಿ ನಡೆದ ಕೊಲೆ ಪ್ರಕರಣ ಇದಾಗಿದ್ದು. ಚಂದ್ರು ಎಂಬ ಯುವಕ ಹಲ್ಲೆಯಿಂದಾಗಿ ಸಾವನಪ್ಪಿದ್ದ. ಇದು ಭಾರೀ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಗೊತ್ತಿಲ್ಲದಕ್ಕೆ ಕೊಲೆ ನಡೆದಿತ್ತು ಎಂದು ಹೇಳಿದ್ದರು. ಇತ್ತ ಪೊಲೀಸ್ ಆಯುಕ್ತ ಕಮಲ್ ಪಂತ್ ಉರ್ದು ಗೊತ್ತಿಲ್ಲ ಎನ್ನುವ ಕಾರಣಕ್ಕೆ ನಡೆದ ಕೊಲೆಯಲ್ಲ ಎಂದಿದ್ದರು. ಘಟನೆ ರಾಜ್ಯಾದ್ಯಂತ ಭಾರೀ ಕೋಲಾಹಲ ಸೃಷ್ಟಿಸಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿತ್ತು.

Leave a Comment

Your email address will not be published. Required fields are marked *