Ad Widget .

ಪುತ್ತೂರು ಜಾತ್ರೆಗೂ ತಟ್ಟಿದ ಧರ್ಮದ್ವೇಷ| ಅನ್ಯಮತೀಯರ ಅಟೋ ಬಳಸದಂತೆ ಕ್ಯಾಂಪೇನ್

Ad Widget . Ad Widget .

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವಾಗ ಅನ್ಯಧರ್ಮೀಯರ ಕ್ಯಾಬ್ ಬಳಸದಂತೆ ಕರೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಅಭಿಯಾನ ಆರಂಭವಾಗಿದೆ.

Ad Widget . Ad Widget .

ಹತ್ತು ದಿನಗಳ ಕಾಲ ನಡೆಯುವ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವೇಳೆ ಹಿಂದೂಗಳು ಭಗವಾ ಧ್ವಜ ಇರುವ ಹಿಂದೂಗಳ ಆಟೋವನ್ನು ಹೊರತುಪಡಿಸಿ ಇತರ ಆಟೋಗಳನ್ನು ಬಳಸದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ವ್ಯಾಪಾರ ನಿರ್ಬಂಧದ ಬಳಿಕ ಈಗ ಅನ್ಯಮತೀಯರಿಗೆ ಮತ್ತೊಂದು ನಿರ್ಬಂಧ ಹೇರಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಅಭಿಯಾನ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕಿನ ಹಿಂದೂಗಳ ಆಟೋಗಳಿಗೆ ಭಗವಾ ಧ್ವಜ ನೀಡಿ ಅಭಿಯಾನ ಆರಂಭಿಸಿದೆ.

“ಭಗವಾ ಧ್ವಜ ಇದ್ದ ಆಟೋಗಳನ್ನೇ ಹಿಂದೂ ಭಕ್ತಾದಿಗಳು ಆಯ್ಕೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಪುತ್ತೂರಿನ ಹಿಂದೂ ಭಕ್ತರಲ್ಲಿ ಮನವಿ ಮಾಡಿದೆ. ಜಾತ್ರೆಯ ನೆಪದಲ್ಲಿ ಅನ್ಯಮತೀಯರಿಂದ ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆಯ ಆರೋಪ ಇದೆ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮೋಸ ಮಾಡುವ ಜಾಲ ಆಗುತ್ತಿದೆ. ಆಮಿಷಗಳನ್ನು ತೋರಿಸಿ ಅವರನ್ನು ಪುಸಲಾಯಿಸಿ ಅವರ ಬಾಳನ್ನು ಹಾಳು ಮಾಡುವ ಕೆಲಸವನ್ನು ಅನ್ಯಮತೀಯ ಯುವಕರು ಮಾಡುತ್ತಿದ್ದಾರೆ. ಇಡೀ ಜಾತ್ರಾ ಉತ್ಸವದಲ್ಲಿ ಎಲ್ಲೇ ಹಿಂದೂ ಯುವತಿಯರು ಅನ್ಯಧರ್ಮದ ಯುವಕರ ಜೊತೆ ಸುತ್ತಾಡುವುದನ್ನು ನೋಡಿದರೆ ಆಟೋ ಚಾಲಕರು ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ತರಬೇಕು,” ಅಂತಾ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಡಾ.ಪ್ರಸಾದ್ ಭಂಡಾರಿ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *