ಸಮಗ್ರ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನಲ್ಲಿ ಇಂದು ಸಂಜೆ ಭಾರೀ ಮಳೆಸುರಿದಿದ್ದು, ಮಳೆ ಅವಾಂತರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳ ಕಾರು ಜಖಂಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆಯ ಬಾರೀ ಗುಡುಗು ಸಹಿತ ಗಾಳಿ ಮಳೆಗೆ ಕಾರೊಂದರ ಮೇಲೆ ಮರದ ರೆಂಬೆ ಮುರಿದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.
ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಘಟನೆ ನಡೆದಿದ್ದು, ದಾವಣಗೆರೆಯಿಂದ ಯಾತ್ರಿಕರಾಗಿ ಬಂದಿರುವವರ ಕಾರು ಘಟನೆಯಲ್ಲಿ ಜಖಂಗೊಂಡಿರುವುದು ಎಂದು ತಿಳಿದುಬಂದಿದೆ. ಇಲ್ಲಿನ ಬೃಹತ್ ಮರದ ರೆಂಬೆ ಮುರಿದು ಕಾರಿನ ಮೇಲೆಯೆ ಬಿದ್ದಿದೆ. ಕಾರಿನಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಸಂಭಾವ್ಯ ಬಾರೀ ಅನಾಹುತ ತಪ್ಪಿದೆ. ತಾಲೂಕಿನ ವಿವಿಧೆಡೆ ಸುರಿದ ಮಳೆಗೆ ಕೃಷಿಹಾನಿ ಸಂಭವಿಸಿದ ವರದಿಗಳು ಬಂದಿವೆ.
