Ad Widget .

“ಅಪ್ಪಾ ಪ್ಲೀಸ್ ಕೊಲ್ಬೇಡ” ಅಂದ್ರೂ ಕರಗದ ಕ್ರೂರಮನ| ಹೆತ್ತ ಮಗನನ್ನೇ ಬೆಂಕಿ ಇಟ್ಟು ಕೊಂದ ಅಪ್ಪ| ಜೀವಕ್ಕಿಂತ ವ್ಯವಹಾರವೇ ದೊಡ್ಡದಾಯ್ತು!

Ad Widget . Ad Widget .

ಸಮಗ್ರ ನ್ಯೂಸ್: ಹಾಡಹಗಲೇ ಅಪ್ಪನೊಬ್ಬ ತನ್ನ ಮಗನಿಗೆ ನಡುರಸ್ತೆಯಲ್ಲಿ ಬೆಂಕಿ ಇಟ್ಟು ಕೊಂದ ಘಟನೆ ಅಜಾದ್ ನಗರದಲ್ಲಿ ಸಂಭವಿಸಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.

Ad Widget . Ad Widget .

ಅಪ್ಪನಿಂದಲೇ ಕೊಲೆಯಾದ ಮಗನ ಹೆಸರು ಅರ್ಪಿತ್​. ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ದೊಡ್ಡ ದೊಡ್ಡ ಬಿಲ್ಡಿಂಗ್ ಪ್ಯಾಬ್ರಿಕೇಷನ್ ಬಿಜಿನೆಸ್ ಮಾಡಿಕೊಂಡಿದ್ದ. ಈ ಜವಾಬ್ದಾರಿಯನ್ನು ಮಗನಿಗೆ ಸುರೇಂದ್ರ ನೀಡಿದ್ದ. ವ್ಯವಹಾರದಲ್ಲಿ ಸಾಕಷ್ಟು ಏರುಪೇರಾಗಿತ್ತು. ಹಣದ ಲೆಕ್ಕದಲ್ಲೂ ವ್ಯತ್ಯಾಸ ಕಂಡುಬಂದಿತ್ತು. ಇದೇ ವಿಚಾರಕ್ಕೆ ಬಿಜಿನೆಸ್ ಮೆಟೀರಿಯಲ್ ಇಟ್ಟಿದ್ದ ಗೋದಾಮಿನಲ್ಲಿ ಕೆಲಸಗಾರರ ಮುಂದೆಯೇ ಅಪ್ಪ-ಮಗನ ಮಧ್ಯೆ ಏ.1ರ ಮಧ್ಯಾಹ್ನ ಗಲಾಟೆ ನಡೆದಿತ್ತು. ಮಾತಿನ ಚಕಮಕಿ ವೇಳೆ ‘ಸಾಯಿಸ್ತೀಯಾ ಸಾಯಿಸು ನೋಡೋಣ… ಲೆಕ್ಕ ಕೊಟ್ರು ಸಾಯಿಸ್ತೀಯಾ.. ಲೆಕ್ಕ ನೀಡದಿದ್ರೂ ಸಾಯಿಸ್ತೀಯಾ… ನಾನು ಲೆಕ್ಕ ಕೊಡಲ್ಲ’ ಎಂದು ಅರ್ಪಿತ್ ಕೂಗಾಡಿದ್ದ. ಸಿಟ್ಟಾದ ಅಪ್ಪ, ಗೋದಾಮು ಬಳಿಯ ಮುಖ್ಯರಸ್ತೆಯಲ್ಲಿ ಮಗನಿಗೆ ಥಿನ್ನರ್ ಎರಚಿ ಬೆಂಕಿ ಇಟ್ಟಿದ್ದಾನೆ.

ಬೆಂಕಿಯಿಂದ ಸುಟ್ಟು ನರಳಾಡುತ್ತಿದ್ದ ಮಗನನ್ನು ಕೂಡಲೇ ಪರಿಚಯಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಮುಂದೆ ಅರ್ಪಿತ್ ಕೊಟ್ಟ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧಾರಿಸಿ ಚಾಮರಾಜಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅರ್ಪಿತ್​ ಎ.7 ರಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

Leave a Comment

Your email address will not be published. Required fields are marked *