Ad Widget .

ಕಡಲತಡಿಯಲ್ಲಿ ಮನದರಸಿ ಕೈಹಿಡಿದ ಸಕ್ಕರೆ ನಾಡಿನ ಹುಡುಗ| ಆಹಾ… ಇದು ಪ್ರಕೃತಿ ಸೌಂದರ್ಯದ ಸಿಂಪಲ್ ಮದ್ವೆ!

ಸಮಗ್ರ ನ್ಯೂಸ್: ಇದೇ ಮೊದಲ ಬಾರಿಗೆ ಕಡಲ ತೀರದಲ್ಲಿ ಯುವ ಜೋಡಿಯೊಂದು ಸಪ್ತಪದಿ ತುಳಿದಿದೆ. ಸಮುದ್ರ ತೀರದಲ್ಲಿ ಸಕ್ಕರೆ ನಾಡಿನ ಜೋಡಿಯೊಂದು ಸಪ್ತಪದಿ ತುಳಿದಿದೆ. ಪ್ರಕೃತಿ ಮಡಿಲಲ್ಲಿ ಸರಳವಾಗಿ ಮದುವೆ ಆಗಿದ್ದರೂ ಪ್ರಕೃತಿಯ ಸೌಂದರ್ಯ ಮದ್ವೆಗೆ ಅದ್ದೂರಿತನ ನೀಡಿದೆ. ಈ ಜೋಡಿಯ‌ ಮದುವೆ ಫೋಟೋಗಳೂ ವೈರಲ್​ ಆಗಿದ್ದು, ವ್ಹಾವ್​ ಎನ್ನುತ್ತಿದ್ದಾರೆ ನೆಟ್ಟಿಗರು.

Ad Widget . Ad Widget .

ಮಂಡ್ಯದ ಲಿಂಗಾಯತ ಸಮುದಾಯದ ಯುವಕ-ಯುವತಿ ಕುಂದಾಪುರದ ಎಂ.ಕೋಡಿ ಸಮೀಪ ಬುಧವಾರ ಬೆಳಗ್ಗೆ ಕಡಲ ತೀರದ ಪ್ರಕೃತಿ ಮಡಿಲಲ್ಲಿ ಮದುವೆಯಾದರು. ಕಡಲ ತೀರದಲ್ಲೇ ವಿವಾಹ ಮಂಟಪ ನಿರ್ಮಿಸಲಾಗಿತ್ತು. ಕಟ್ಕೇರಿ ಶಿವಾನಂದ ಐತಾಳ್​ ಸುಲಗ್ನೇ ಸಾವಧಾನ ಮಂತ್ರದ ಮಂಗಳ ಸೂತ್ರ ಧಾರಣೆ ಮಾಡಿಸಿದರು. ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಉಪಸ್ಥಿತಿಯಲ್ಲಿ ಮದುವೆ ಆಗಿದ್ದು, ವಧು-ವರನ ಕಡೆಯವರು ಭಾಗವಹಿಸಿದ್ದರು. ಆನೆಗುಡ್ಡೆ ದೇವಸ್ಥಾನದ ಪ್ರಸಾದವೇ ಮದುವೆ ಭೋಜನವಾಗಿತ್ತು.

Ad Widget . Ad Widget .

ಪ್ರತಿಯೊಬ್ಬರಿಗೂ ಮದ್ವೆ ಬಗ್ಗೆ ನೂರಾರು ಕನಸು ಇರುತ್ತೆ. ಹೀಗೆ ನಡೆಯಬೇಕು, ಇಂತಹದ್ದೇ ಕಲ್ಯಾಣ ಮಂಟಪ, ಧಿರಿಸು, ಆಭರಣ, ಭೋಜನದ ಮೆನು, ಪುಷ್ಪಾಲಂಕಾರ… ಅಬ್ಬಬ್ಬಾ ಒಂದಲ್ಲ, ಎರಡಲ್ಲ… ಆದರೆ ಪ್ರಕೃತಿ ಮಡಿಲಲ್ಲಿ ತೆರೆದ ಮಂಟಪ ನಿರ್ಮಿಸಿ ಮದ್ವೆ ಆಗುವುದು ವಿಶೇಷ.

Leave a Comment

Your email address will not be published. Required fields are marked *