Ad Widget .

ಮುಸ್ಕಾನ್ ಪರ ಬ್ಯಾಟಿಂಗ್ ನಡೆಸಿದ ಅಲ್ ಖೈದಾ ನಾಯಕ ಜವಾಹಿರಿ| “ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ” ಎಂದು ಅಲವತ್ತುಕೊಂಡ ಮುಸ್ಕಾನ್ ಕುಟುಂಬ

Ad Widget . Ad Widget .

ಸಮಗ್ರ ನ್ಯೂಸ್ : ನಮ್ಮನ್ನು ‌ನಮ್ಮಷ್ಟಕ್ಕೇ ಬಿಟ್ಟುಬಿಡಿ, ಹೇಗೋ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ, ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮಂಡ್ಯ‌ ವಿದ್ಯಾರ್ಥಿನಿ ಮುಸ್ಕಾನ್‌ ತಂದೆ ಮನವಿ ಮಾಡಿದ್ದಾರೆ.

Ad Widget . Ad Widget .

ಹಿಜಾಬ್‌ ಗಲಾಟೆ ವೇಳೆ “ಅಲ್ಲಾಹು ಅಕ್ಬರ್‌ ” ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಪರ ಅಲ್‌ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್‌ ಮಾಡಿದ್ದು, ಭಾರತದ ಶ್ರೇಷ್ಠ ಮಹಿಳೆ! ಎಂದು ಕೊಂಡಾಡಿದ್ದಾನೆ.

ಸಧ್ಯ ಈ ಕುರಿತು ಪ್ರತಿಕ್ರಿಯಿಸಿದ ಮುಸ್ಕಾನ್‌, ದಯವಿಟ್ಟು ಇದನ್ನು ಬೆಳೆಸಬಾರದು. ನಮ್ಮ ದೇಶದಲ್ಲಿ ನೆಮ್ಮದಿಯಿಂದ ಇದ್ದೇವೆ, ನಮ್ಮನ್ನ ಬಿಟ್ಟುಬಿಡಿ. ಜವಾಹಿರಿ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಜವಾಹಿರಿ ಅವರನ್ನು ನಾನು ನೋಡಿದ್ದು ಇದೇ ಮೊದಲು. ಇನ್ನು ಎಲ್ಲರನ್ನೂ ಹಾಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.

Leave a Comment

Your email address will not be published. Required fields are marked *