Ad Widget .

ಗಾಂಜಾ ವ್ಯಸನಿ ಮಗನಿಗೆ ಖಾರದ ಪುಡಿ ಎರಚಿ ತಾಯಿ; ಇಲ್ಲಿದೆ ವಿಡಿಯೋ…

ಸಮಗ್ರ ನ್ಯೂಸ್: ಗಾಂಜಾ ವ್ಯಸನಕ್ಕೆ ಒಳಗಾದ ಮಗನನ್ನು ತಾಯಿಯೋರ್ವಳು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿ ಕಣ್ಣಿಗೆ ಖಾರದ ಪುಡಿ ಎರಚಿದ ಪ್ರಸಂಗ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಕೊಡಡ್‌ನಲ್ಲಿ ನಡೆದಿದೆ.

Ad Widget . Ad Widget .

ಗಾಂಜಾ ವ್ಯಸನಕ್ಕೆ ಒಳಗಾದ 15 ವರ್ಷದ ಪುತ್ರನಿಗೆ ಹಲವಾರು ಬಾರಿ ಈ ತಾಯಿ ಬುದ್ದಿ ಹೇಳಿ ವ್ಯಸನದಿಂದ ಹೊರ ಬರುವಂತೆ ಎಚ್ಚರಿಸಿದ್ದಾಳೆ. ಶಾಲೆಗೆ ಹೋಗುತ್ತಿರುವ ಮಗನ ಬಗ್ಗೆ ಇದರಿಂದ ತಾಯಿಗೆ ಚಿಂತೆ ಶುರುವಾಗಿತ್ತು. ಆತ ಕೇಳದೇ ವ್ಯಸನ ಮುಂದುವರಿಸಿದ್ದಕ್ಕೆ ತಾಯಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಅಲ್ಲದೆ ಕಣ್ಣಿಗೆ ಖಾರದ ಪುಡಿ ಹಾಕಿ ಬುದ್ದಿ ಕಲಿಸಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಖಾರದ ಪುಡಿ ಎರಚಿದ್ದರಿಂದ ಯುವಕ ಉರಿ ತಡೆಯಲಾಗದೆ ಕೂಗಿಕೊಂಡಿದ್ದಾನೆ. ಕೊನೆಗೆ ಗಾಂಜಾ ಸೇವನೆ ಬಿಡುತ್ತೇನೆ ಎಂದು ಹೇಳಿದ ಬಳಿಕವಷ್ಟೇ ತಾಯಿ ಆತನನ್ನು ಕಟ್ಟಿ ಹಾಕಿದ ಹಗ್ಗವನ್ನು ಬಿಚ್ಚಿದ್ದಾಳೆ.

Leave a Comment

Your email address will not be published. Required fields are marked *