Ad Widget .

ಗುಂಡ್ಯ: ಭಿನ್ನಕೋಮಿನ ಜೋಡಿಯ ಪತ್ತೆ ಪ್ರಕರಣ| ಸಂಘಟನೆಯ ವಿರುದ್ಧ ದೂರು ನೀಡಿದ ಯುವಕ

ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಕಾಡಿನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ ಸಂಬಂಧಿಸಿ, ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ.

Ad Widget . Ad Widget .

ನಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ನಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಇದೊಂದು ‘ಲವ್ ಜಿಹಾದ್’ ಎಂದು ಹೇಳಲಾಗಿದೆ.

Ad Widget . Ad Widget .

ಹಲ್ಲೆ ಮಾಡಿದ ಆರೋಪದಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಆಟೋ ರಿಕ್ಷಾದಲ್ಲಿ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬಂದು, ನಂತರ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತಲುಪುವಾಗ ಸುರೇಂದ್ರ, ತಿರ್ಥಪ್ರಸಾದ್, ಜಿತೇಂತ್ರ ಹಾಗೂ ಇತರರು ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ, ‘ನೀವು ಎಲ್ಲಿಗೆ ಹೋಗುತ್ತಿದ್ದೀರಾ? ನಿಮ್ಮ ಹೆಸರು ಏನು’? ಎಂದು ಪ್ರಶ್ನಿಸಿದ್ದಾರೆ. ಹೆಸರು ಹೇಳಿದ ಕೂಡಲೇ ಆವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿ, ನನಗೆ ಹಲ್ಲೆ ಮಾಡಲಾಗಿದೆ. ಮಾತ್ರವಲ್ಲದೇ ಜೊತೆಗಿದ್ದ ಯುವತಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

Leave a Comment

Your email address will not be published. Required fields are marked *