ಸಮಗ್ರ ನ್ಯೂಸ್: ಹಳೆ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ.
ಖಾಸಗಿ ವಾಹನಗಳ ಆರ್.ಸಿ.ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. ಟ್ರಾನ್ಸ್ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಿದೆ. 8 ವರ್ಷಗಳ ನಂತರ ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ವಾಹನ ಗುಜರಿ ನೀತಿ ಜಾರಿಗೊಳಿಸಲು ಎಫ್.ಸಿ. ಶುಲ್ಕವನ್ನು ಭಾರಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.