ಸಮಗ್ರ ನ್ಯೂಸ್: ಪರಿಚಯದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಪ್ರಸ್ತುತ ತಾನು 7 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಲವಂತಿಗೆ ಗ್ರಾಮದ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ.
ತನ್ನ ಪರಿಚಯದ ಸಂಜೀವ ಎಂಬ ವ್ಯಕ್ತಿ ದಿನಾಂಕ ಕಳೆದ ಆ.3 ರಂದು ಹಾಗೂ 05 ರಂದು ನನ್ನ ಮನೆಗೆ ಬಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಪ್ರಸ್ತುತ ನಾನು 7 ತಿಂಗಳ ಗರ್ಭೀಣಿಯಾಗಿದ್ದು, ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.