Ad Widget .

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ

ಸಮಗ್ರ ನ್ಯೂಸ್ : ಭಿನ್ನಕೋಮಿನ ಜೋಡಿಯೊಂದು ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಕಾಡಿನ ಪೊದೆಯೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಾ ಸಿಕ್ಕಿಬಿದ್ದಿರುವ ಘಟನೆ ಇಂದು ನಡೆದಿದೆ.

Ad Widget . Ad Widget .

ಪೊದೆಯೊಳಗೆ ಚಕ್ಕಂದವಾಡುತ್ತಿದ್ದ ಈ ಯುವ ಜೋಡಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಜೋಡಿಯ ಕುರಿತು ಫೋಟೋ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Ad Widget . Ad Widget .

ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಜಾಲಿ ಟ್ರಿಪ್ ತೆರಳಿದ್ದು, ಕಾಡಿನ ಮಧ್ಯೆ ನಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಎಚ್ಚೆತ್ತು ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಲೇ ತಮ್ಮ ಸಮುದಾಯದ ಯುವಕನನ್ನು ಬದುಕಿಸುವಲ್ಲಿ ಕೆಲ ರಾಜಕೀಯ ನಾಯಕರು ಪ್ರಯತ್ನ ಪಟ್ಟಿದ್ದಾರೆ ಎನ್ನುವ ಮಾಹಿತಿಯೂ ಹರಿದಾಡಿದೆ.

Leave a Comment

Your email address will not be published. Required fields are marked *