Ad Widget .

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ

ಸಮಗ್ರ ನ್ಯೂಸ್: ಮದುವೆಯೆಂದರೆ ಅದೊಂದು ಗೌಜಿ. ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು, ವಿಐಪಿಗಳು ಬರಬೇಕು, ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆ, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ.

Ad Widget . Ad Widget .

ಸುರತ್ಕಲ್​ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು.

Ad Widget . Ad Widget .

ಲ್ಯಾಂಡ್ ಲಿಂಕ್ಸ್​ನ ಉದ್ಯಮಿಯಾಗಿರುವ ವಿವೇಕಗೌಡ ಛಾಯಾಗ್ರಹಣ ಮತ್ತು ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಶಿವಾನಿ ಶೆಟ್ಟಿ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಇವರ ಈ ವಿವಾಹ ಸಮಾರಂಭದಲ್ಲಿ ಕೇವಲ 100 ಮಂದಿಗೆ ಮಾತ್ರ ಆಹ್ವಾನವಿತ್ತು.

ಬಂದವರೆಲ್ಲರೂ ಮದುವೆಯಲ್ಲಿ ಭಾಗವಹಿಸುವ ಜೊತೆಗೆ ಆದರ್ಶಗಳನ್ನು ಕಾಣುವಂತಾಗಿದೆ. ವಧು – ವರರು ತಾವು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳ್ವೆ ನಡೆಸುವ, ತಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಕನ್ನಡದಲ್ಲಿ ಪ್ರತಿಜ್ಞೆ ತೆಗೆದುಕೊಂಡು ಹಾರ ಬದಲಾವಣೆ, ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಸಾಮಾಜಿಕ ಚಿಂತಕ ವಿವೇಕಾನಂದ ಎಚ್.ಕೆ ವಿವಾಹ ಕಾರ್ಯ ನಡೆಸಿಕೊಟ್ಟರು.

ಈ ಮದುವೆಯು ವರದಕ್ಷಿಣೆ ತೆಗೆದುಕೊಳ್ಳದೇ, ಆಡಂಬರವಿಲ್ಲದೆ ಮದುವೆ ನಡೆಯಿತು. ವ್ಯರ್ಥ ಖರ್ಚು ಮಾಡದೆ ಸರಳವಾಗಿ ಜರುಗಿತು. ಇಡೀ ಸಮಾರಂಭಗಳಲ್ಲಿ ಪರಿಸರಕ್ಕೆ ಹಾನಿಕಾರಕ ವಸ್ತುಗಳ ಬಳಕೆ ಇರಲಿಲ್ಲ. ಪರಿಸರಕ್ಕೆ ಪೂರಕ ಮತ್ತು ವೇದಿಕೆಯ ಅಲಂಕಾರವನ್ನು ವಧು ಶಿವಾನಿ ಅವರೇ ಸಿದ್ಧ ಪಡಿಸಿದ್ದರು. ವಧು-ವರರಿಗೆ ಅಕ್ಷತೆ ಹಾಕಲು ಅಕ್ಕಿಯ ಬದಲು ಹೂವುಗಳ ಎಸಳುಗಳ ಬಳಸಲಾಯಿತು.

ಅಲ್ಲದೇ, ಆಹಾರ ಪೋಲು ಮಾಡದಂತೆ ಪ್ರತಿಜ್ಞೆ ಸಹ ಮಾಡಲಾಯಿತು. ಮದುವೆಗೆ ಬಂದವರಿಗೆ ಸಸ್ಯಹಾರಿ,‌ ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಊಟಕ್ಕೂ ಮೊದಲು ಜೀವನದಲ್ಲಿ ಅನ್ನ ಪೋಲು ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಪಡೆದುಕೊಂಡದ್ದು ವಿಶಿಷ್ಟವಾಗಿತ್ತು. ಪ್ಲಾಸ್ಟಿಕ್ ಲೋಟದ ಬದಲಿಗೆ ಸ್ಟೀಲ್ ಲೋಟಗಳ ವ್ಯವಸ್ಥೆ ಮಾಡಲಾಗಿತ್ತು.

ಅದ್ದೂರಿ, ಆಡಂಬರಗಳ ಈ ಯುಗದಲ್ಲಿ ರಾಷ್ಟ್ರಕವಿ ಕುವೆಂಪು ಆಶಯದ ‘ಮಂತ್ರಮಾಂಗಲ್ಯ’ ಹೊಸ ಹೆಜ್ಜೆ ಇಟ್ಟಿದೆ.ಮಂತ್ರ ಮಾಂಗಲ್ಯ ಅನ್ನೋದು ರಾಷ್ಟ್ರ ಕವಿ ಕುವೆಂಪು ಹುಟ್ಟು ಹಾಕಿದ ಪರಿಕಲ್ಪನೆಯಾಗಿದೆ. ಅದ್ಧೂರಿ ಮದುವೆ ಎಂಬುವುದು ಬಡ ಜನರ ಪಾಲಿಗೆ ಶಾಪವಾಗೋವುದನ್ನು ವಿರೋಧಿಸಿ ಕುವೆಂಪು ಈ ಪರಿಕಲ್ಪನೆಯನ್ನು ತನ್ನ ಮಗ ಪೂರ್ಣ ಚಂದ್ರ ತೇಜಸ್ವಿಗೆ ಮಂತ್ರ ಮಾಂಗಲ್ಯ ಮಾದರಿಯಲ್ಲೇ ಮದುವೆ ಮಾಡಿಸಿದ್ದರು.

ಮಂತ್ರ ಮಾಂಗಲ್ಯ ವಿವಾಹದ ನಿಯಮಗಳ ಪ್ರಕಾರ ವಿವಾಹದ ಯಾವೊಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಕೂಡದು. ಯಾವ ರೂಪದಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆಯನ್ನಾಗಲಿ ವಧುದಕ್ಷಿಣೆಯನ್ನಾಗಲಿ ಯಾರು ಸ್ವೀಕರಿಸಬಾರದು. ವರದಕ್ಷಿಣೆ ಸ್ವೀಕರಿಸುವ ದುಡ್ಡಿನ ದಲ್ಲಾಳಿ ವ್ಯವಹಾರದಲ್ಲಿ ಭಾಗಿಗಳಾಗುವ ಹಿರಿಯರು ಮಂತ್ರೋಪದೇಶಕ್ಕೂ, ಪ್ರತಿಜ್ಞಾವಿಧಿ ಉಪದೇಶಕ್ಕೂ, ವಧು-ವರರು ಮಂತ್ರೋಚ್ಚಾರಕ್ಕೂ, ಪ್ರತಿಜ್ಞೆ ತೆಗೆದುಕೊಳ್ಳಲೂ ಅನರ್ಹರಾಗಿರುತ್ತಾರೆ.

Leave a Comment

Your email address will not be published. Required fields are marked *