Ad Widget .

ದ್ವಾದಶ ರಾಶಿಗಳಿಗೆ ವಾರಭವಿಷ್ಯ

ಸಮಗ್ರ ನ್ಯೂಸ್: ಹೊಸ ಸಂವತ್ಸರಾರಂಭದ ಮೊದಲ ವಾರದಲ್ಲಿ ನಾವಿದ್ದೇವೆ. ಯುಗಾದಿಯ ಆದಿಯಲ್ಲಿ ದ್ವಾದಶ ರಾಶಿಗಳ ಮೇಲೆ ಗ್ರಹಾಧಿಪತಿಗಳ ಪರಿಣಾಮ ಮತ್ತು ಗೋಚಾರಫಲ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ.

Ad Widget . Ad Widget .

ಮೇಷ: ರಾಶಿಯಿಂದ ಮೀನ ರಾಶಿಯವರಿಗೆ ಈ ಸಂವತ್ಸರದಲ್ಲಿ ಶನಿಯು ರಾಜನು ಹಾಗೂ ಗುರುವೇ ಮಂತ್ರಿ ಆಗಿರುತ್ತಾನೆ. ಏಕಾದಶಕ್ಕೆ ಶನಿಯು ಬಂದು ಜೀವನದಲ್ಲಿ ಸುಖ ಸಂತೋಷ ಆನಂದ ಬಂದು ಸೇರುತ್ತದೆ.ನಿರೀಕ್ಷಿಸಿದ ಧನವೂ ಬಂದು ಕೂಡುತ್ತದೆ. ಭಕ್ತಿಯೊಂದೇ ಮನುಷ್ಯನ ಶ್ರೇಯಸ್ಸಿಗೆ ಕಾರಣವು. ಮಾತಾಪಿತರಿಗೆ ವಂದಿಸಿ ಪ್ರತಿ ವಾರದಲ್ಲಿ ಶನಿಯನ್ನು ಪೂಜಿಸಿದರೆ ವಿಶೇಷ ಫಲಪ್ರಾಪ್ತಿಯಾಗುತ್ತದೆ. ಶುಭಕೃತ ನಾಮ ಸಂವತ್ಸರವು ಉತ್ತಮವಾಗಿದ್ದು ಒಳ್ಳೆಯ ಕೆಲಸ ಮಾಡಿರಿ, ಶ್ರೇಯಸ್ಸನ್ನು ಪಡೆಯಿರಿ.

Ad Widget . Ad Widget .

ವೃಷಭ: ಲಗ್ನದಲ್ಲಿದ್ದ ರಾಹು ಹಿಂದಕ್ಕೆ ಸರಿದು ಕೇತುವು ತುಲಾರಾಶಿಗೆ ಬಂದು ಸೇರಿರುವುದು ನಿಮಗೆ ಶುಭಸೂಚನೆ. ಕೆಲಸಗಳು ನಿಮ್ಮಂತೆ ನಡೆದು ಏಕದಶ ಗುರುವು ಸಿರಿ ಸಂತೋಷ ಸುಖವನ್ನು ಕೊಟ್ಟು ಕಾಪಾಡುವುದರಲ್ಲಿ ಸಂದೇಹವೇ ಬೇಡ. ದಶಮದಲ್ಲಿ ಶನಿ ಬಂದು ನಿಮ್ಮ ಕಾರ್ಯಗಳನ್ನು ಗಮನಿಸಿ ಹನ್ನೊಂದಕ್ಕೆ ಬಂದಾಗ ವಿಶೇಷ ಫಲವನ್ನು ನೀಡುತ್ತಾನೆ. ದೇಹಕ್ಕೆ ಆಯಾಸ ಬೇಡ, ಮನಸಿಗೆ ಚಿಂತೆ ಬೇಡ, ಗುರುವಿನ ಅನುಗ್ರಹವಿದೆ. ನೀವು ಶಾಂತರಾಗಿದ್ದು, ಕೆಲಸವನ್ನು ಸಾಧಿಸುವ ಸಮಯವಿದು. ಸಂಸಾರದಲ್ಲಿ ಸುಖಶಾಂತಿ ಆನಂದವನ್ನು ಕೊಡುವ ಸಮಯ, ಸುಖವಾಗಿ ಬಾಳಿರಿ. ದುರ್ಗಾಮಾತೆಯನ್ನು ನೆನೆಸಿ, ಅನಂತವಾಗಿ ಕೆಂಪು ಹೂವಿನಿಂದ ದುರ್ಗಾಷ್ಟೋತ್ತರದಿಂದ ಪೂಜಿಸಿದರೆ, ಆನಂದ ಲಭಿಸುತ್ತದೆ.

ಮಿಥುನ: ಬುಧನು ಅಧಿಪತಿಯಾದ ಮಿಥುನ ರಾಶಿಗೆ ಗುರುವು ದಶಮಕ್ಕೆ, ಶನಿಯು ನವಮಕ್ಕೆ ಬಂದು ನಿಮಗೆ ಸುಖವನ್ನು ನೀಡಿದರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು ನಿಮ್ಮ ಧ್ಯೇಯವಾಗಿರಬೇಕು. ನುಡಿದಂತೆ ನಡೆಯಿರಿ, ನಾನು ನನ್ನದೆಂಬ ಅಹಂಕಾರ ತೊರೆದು, ಶನಿಗಾಗಿ ಪ್ರಾರ್ಥನೆ ಇರಲಿ. ಶನಿಯನ್ನು ಪೂಜಿಸಿದರೆ ಶ್ರೇಯಸ್ಸು ಉಂಟಾಗುತ್ತದೆ. ಮಾತಿನಲ್ಲಿ ಎಚ್ಚರಿಕೆ ಇರಲಿ. ಸೌಮ್ಯವಾದ ನಡತೆಯು ನಿಮ್ಮಲ್ಲಿರಲಿ. ನಿಮ್ಮನ್ನು ಕಾಯವುದು ದೇವರು, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಧನ್ವಂತರಿ ಅಷ್ಟೋತ್ತರ ಪಠಿಸಿ, ಶುಭಫಲ ಐವತ್ತು ಭಾಗ ಮಾತ್ರವೇ ಇರುತ್ತದೆ.

ಕಟಕ: ಈ ರಾಶಿಗೆ ಚಂದ್ರನು ಅಧಿಪತಿ, ಮನೋಕಾರಕ ಮನಸ್ಸನ್ನು ವಿಕಾರ ಮಾಡದೆ ಉದಾರ ಬುದ್ಧಿ, ನಕಾರಾತ್ಮಕ ಚಿಂತನೆಯನ್ನು ಬಿಟ್ಟು, ಅಷ್ಟಮ ಶನಿಯನ್ನು ದಾಟಿ, ಜೀವನವನ್ನು ಗೆದ್ದು, ನಿಮ್ಮ ಪಾಪವನ್ನು ತೊಳೆದು, ಪುಣ್ಯಾಂಶ ಕೊಡುವ ಗ್ರಹವು. ಶನಿಗಾಗಿ ವಿಶೇಷ ಪ್ರಾರ್ಥನೆ ಇರಲಿ. ಅತಿ ದುಡಿಮೆಯು ನಿಮ್ಮ ಶರೀರವನ್ನು ಆಯಾಸದಿಂದ ಬಳಲಿಸಿ, ನಿಶ್ಯಕ್ತಿ ಉಂಟುಮಾಡುತ್ತದೆ. ಶಕ್ತಿ ಇದ್ದಷ್ಟೂ ಕೆಲಸ ಮಾಡಬೇಕು, ತಲೆ ಗಟ್ಟಿಯಾಗಿದೆ ಎಂದು ನೂರು ಕೆ.ಜಿ.ಯ ಭಾರ ಹೊತ್ತರೆ ಅಜಾಗರೂಕತೆಯಿಂದ ನಿಮ್ಮ ಶರೀರ ಸ್ವಾಸ್ಥ್ಯ ಕಳೆದುಕೊಳ್ಳಬಾರದು. ಶಿವಪಂಚಾಕ್ಷರಿ ಜಪ, ದಾರಿದ್ರ್ಯ ದುಃಖ ದಹನ ಶಿವಸ್ತೋತ್ರ ಪಾರಾಯಣ ಮಾಡಿ, ಜಗನ್ ರಕ್ಷಕ ತ್ರ್ಯಯಂಬಕನೇ ನಿಮ್ಮನ್ನು ಕಾಪಾಡುತ್ತದೆ. ಸಮಬಲದ ಸಂವತ್ಸರ.

ಸಿಂಹ: ತಾತ್ಕಾಲಿಕವಾಗಿ ಶನಿಯು ಸಪ್ತಮಕ್ಕೆ, ಗುರುವು ಅಷ್ಟಮಕ್ಕೆ ಚಲಿಸಿದರೂ, ಮಖ ನಕ್ಷತ್ರ ಕಾಪಾಡುವವನು. ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣನೇ ಸೂರ್ಯನನ್ನು ಅರ್ಚಿಸಿ. ದುಃಖವೂ ಇಲ್ಲ. ಸೂರ್ಯನಮಸ್ಕಾರ ಮಾಡಿದರೆ ಹೆಚ್ಚಿನ ಫಲ. ಮೇ 17ರಿಂದ ಜುಲೈ 17ರ ವರೆಗೂ ನಿಮ್ಮ ವಿಚಾರಗಳು ಶಾಂತವಾಗಿ ಸಾಗಲಿ. ಮುಂದೆ ಶನಿಯು ಆರಕ್ಕೆ ಬಂದು, ಗುರುವು ಮೀನ ರಾಶಿಯಲ್ಲಿ ಇರುವುದರಿಂದ ಸಂರಕ್ಷಣೆ ನೀಡುತ್ತಾನೆ. ಮನಸು ದುರ್ಬಲವಾಗಿ ದೈವಬಲ ಕಳೆದುಕೊಳ್ಳದೆ ನಿಮ್ಮ ವಂಶದವರು ಪೂಜೆ ಮಾಡಿ ಅನುಗ್ರಹ ಪಡೆದ ಗುರುಗಳನ್ನು, ಮತ್ತೆ ಪೂಜಿಸಿ ವಿಶೇಷ ಧನವೂ ಪ್ರಾಪ್ತವಾಗಿ ಮನಸಿಗೆ ಉತ್ಸಾಹ ಧೈರ್ಯ ತುಂಬುತ್ತದೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ವಿಶೇಷ ಫಲ. ಕೊರತೆಯ ಜೀವನ ಇರುವುದಿಲ್ಲ. ಸುಖಶಾಂತಿಯಿಂದ ತೃಪ್ತಿಯಾಗಿ ಬಾಳಿರಿ.

ಕನ್ಯಾ: ಈ ರಾಶಿಯವರಿಗೆ ಪಂಚಮ ಶನಿಯು ಕಳೆದು, ಗುರುವು ಸಪ್ತಮಕ್ಕೆ ಬಂದು, ನಿಮಗೆ ಹರಸುವ ವೇಳೆ ಪಂಚಮ ಶನಿಯು ಪರಿಪೂರ್ಣವಾಗಿ ಬಿಡುವುದು. 2023 ಜನವರಿಯವರೆಗೂ ಆರೋಗ್ಯವನ್ನು ಕಾಪಾಡಿಕೊಂಡು ಸಾಗಿರಿ. ಅನಾರೋಗ್ಯ ಹಾಗೂ ಕಷ್ಟವು ನಿಮ್ಮನ್ನು ಬಾಧಿಸುವುದಿಲ್ಲ. ಶನಿಗಾಗಿ ಪ್ರಾರ್ಥನೆ, ತಿಲಹೋಮ, ತಿಲದಾನ, ಅಷ್ಟೋತ್ತರ ಮಾಸಕ್ಕೆ ಒಮ್ಮೆ ಮಾಡಿದರೆ ಹೆಚ್ಚಿನ ಮನಶಾಂತಿ, ತೃಪ್ತಿಯಾದ ಧನವನ್ನು ಪಡೆದು, ಸುಖವನ್ನು ಕಾಣಬಹುದು. ಗುರುಚರಿತ್ರೆ ಪಾರಾಯಣ, ಸಾಯಂಕಾಲ ದತ್ತಾತ್ರೇಯನಿಗೆ ಆರತಿ ಮಾಡಿ ಭಜಿಸಿದರೆ ಅಧಿಕ ಫಲ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಹಿರಿಯರಿಂದ ಬರುವ ಆಸ್ತಿಯಲ್ಲಿ ಧನ ಬರುವ ಸಂದೇಹವಿಲ್ಲ.

ತುಲಾ: ಪಂಚಮಕ್ಕೆ ಶನಿ ಬಂದರೂ ಷಷ್ಠಕ್ಕೆ ಗುರು ಬಂದರೂ ತಕ್ಕಡಿಯಲ್ಲಿ ನಾವು ಏನು ತೂಗುತ್ತೇವೆಯೋ ಅದೇ ನಮ್ಮ ಫಲ. ನಾವು ಸಾಧಕರೆಂದು ನಿಮ್ಮವರಿಗೆ ತೋರಿಸಬೇಕಾದರೆ ಭಯ ತೊರೆದು ಧೈರ್ಯದಿಂದ ಜೀವನ ಸಾಗಿಸಿ. ಧನಕ್ಕೆ ಕೊರತೆ ಇಲ್ಲ, ಸಂಸಾರಕ್ಕಾಗಿ ಅಧಿಕ ವೆಚ್ಚವಿರುತ್ತದೆ. ಮಕ್ಕಳ ಮೇಲೆ ಹತೋಟಿ ಇರಲಿ. ಮಕ್ಕಳನ್ನು ಶಿಕ್ಷಿಸುವುದು ದೊಡ್ಡ ಅಪರಾಧ. ಮಕ್ಕಳ ಬುದ್ಧಿಯನ್ನು ತುಲನೆ ಮಾಡದೆ ಸರಸ್ವತಿ ಮಂತ್ರ ಉಪದೇಶ ಕೊಡಿಸಿ. ಗಾಣಗಾಪುರವೇ ನಿಮ್ಮ ಯಾತ್ರಾಸ್ಥಳವಾಗಲಿ. ಗುರುಚರಿತ್ರೆಯೇ ಪಾರಾಯಣವೇ ಆಹಾರವಾಗಿರಲಿ. ನಿಮ್ಮನ್ನು ಯಾರೂ ಸೋಲಿಸಲಾರರು. ಕೇತುವು ತುಲಾರಾಶಿಗೆ ಬರುವುದರಿಂದ ಗಣೇಶನನ್ನು ಪೂಜಿಸಿ.

ವೃಶ್ಚಿಕ: ಮನುಷ್ಯನಿಗೆ ಉಸಿರಾಟಕ್ಕೆ ಆಮ್ಲಜನಕವೇ ಆಹಾರ. ಹೊಟ್ಟೆ ಹಿಡಿದಷ್ಟು ಮಾತ್ರ ಊಟ ಮಾಡಿ, ಅಂತೆಯೇ ಧನಾಗಮನವೇ ಈಗ ನಿಮ್ಮ ಆಹಾರ. ನಿಮ್ಮ ನಿರೀಕ್ಷೆ ಮೀರಿ ಧನ ಸಂಪಾದನೆ ಆಗಿ ಸುಖ ಹೆಚ್ಚಿ ನೆಮ್ಮದಿಯನ್ನು ಕಾಣುವ ಸಮಯ, ಭಯ ಬೇಡ. ಬದುಕುವ ದಾರಿಯಲ್ಲಿ ಕಷ್ಟಪಟ್ಟು ಸಾಗಿರಿ. ಭೂವ್ಯವಹಾರದಲ್ಲಿ ಸಿಲುಕಿದ ಹಣ ಬಿಡಿಸಿಕೊಳ್ಳುವ ಸಮಯ. ಸಾಲಗಳನ್ನು ತೀರಿಸಿ, ದಾನಧರ್ಮ ಮಾಡುವ ಕಾಲ. ಲಕ್ಷ್ಮೀನರಸಿಂಹನನ್ನು ಅರ್ಚಿಸಿ ಪೂಜಿಸಿ.

ಧನುಸ್ಸು: ಧನುರಾಶಿಯವರಿಗೆ ಗುರುವು ಸ್ವಕ್ಷೇತ್ರಕ್ಕೆ ನಡೆದು ಅವರನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ಶನಿಯು ಮೂರನೇ ಮನೆಗೆ ಬಂದು ಸುಖ ಕೀರ್ತಿ ನೀಡುತ್ತಾನೆ. ಇವ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಧನುರ್, ಮೀನ ರಾಶಿಯವರು ಈ ಜಗತ್ತು ದೈವದಿಂದ ನಿರ್ಮಾಣವಾದದ್ದು ಎಂದು ಅರಿತು ದೈವಪ್ರಾರ್ಥನೆ ಅನಂತವಾಗಿ ಮಾಡಿರಿ. ಕುಲಗುರುಗಳನ್ನು ಪೂಜಿಸಿ. ಗುರು ದತ್ತಾತ್ರೇಯನೇ ನಿಮ್ಮ ಉಸಿರಾಗಿರಲಿ. ಗುರು ಚರಿತ್ರೆಯ ಪಾರಾಯಣವನ್ನು ಮರೆಯದೇ ಮಾಡಿರಿ. ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರವನ್ನು ಪಠಿಸಿ. ಶುಭವೂ ಲಾಭವೂ ಕೀರ್ತಿಯ ಬದುಕು ಬರುತ್ತದೆ.

ಮಕರ: ಕುಂಭರಾಶಿಗೆ ಶನಿಯು, ಮೀನ ರಾಶಿಗೆ ಗುರು ಸೇರುವುದು ಒಳ್ಳೆಯ ಸೂಚನೆ. ತಾತ್ಕಾಲಿಕವಾಗಿ ಗೃಹ ಬದಲಾವಣೆ ಇದೆ. ಸ್ವಕ್ಷೇತ್ರ ಗುರುವು ನಿಮಗೆ ಧೈರ್ಯವನ್ನು ತುಂಬಿ ನಡೆಸಬೇಕು. ಶನಿಯ ಸ್ತೋತ್ರ ಪಾರಾಯಣ ಅತ್ಯಗತ್ಯ. ಸುಂದರಕಾಂಡ ಮಾಸಕ್ಕೊಮ್ಮೆ, ಪಾರಾಯಣ ಮಾಡಿದರೆ ಗೃಹಬಾಧೆ ಇರುವುದಿಲ್ಲ. ಸುಖದಿಂದ ಸಂಸಾರವನ್ನು ನಡೆಸಬಹುದು.

ಕುಂಭ: ದ್ವಾದಶ ಗುರುವು ಜನ್ಮಕ್ಕೆ ಬಂದು ನಿಮ್ಮ ಗುರಿಯನ್ನು ಮರೆತ ದಾರಿಯನ್ನು ತೋರಿಸಲು ಮೂಲಗುರುಗಳನ್ನು ಸಂಪರ್ಕಿಸಿ. ಅವರ ಆಶ್ರಯ ಹಾಗೂ ಮಾರ್ಗದರ್ಶನದಿಂದ ಜೀವನವನ್ನು ಕೊಂಡೊಯ್ದರೆ ತೃಪ್ತಿಯು ಸಿಕ್ಕಿ, ಸುಖವನ್ನು ಪಡೆಯುವಿರಿ. ಗುರುವಿಗಾಗಿ ದತ್ತಾತ್ರೇಯನನ್ನು ಪ್ರಾರ್ಥಿಸಿ.

ಮೀನ: ಜನ್ಮಗುರು ಹನ್ನೆರಡರ ಶನಿ ಸಂಚಾರವು ಬಂದು ಹರಿಹರನೇ ನಿಮ್ಮನ್ನು ಕಾಪಾಡಬೇಕು. ವಿಷ್ಣು ಸಹಿತ ಶಂಕರನನ್ನು ಪೂಜಿಸಿ. ವ್ಯಸನ, ಅಚಾತುರ್ಯ, ಅತೃಪ್ತಿಯನ್ನು ದೂರಮಾಡಿ. ಜನ್ಮಗುರುವಿಗೆ ದತ್ತಾತ್ರೇಯನ ಆಶೀರ್ವಾದ ಪಡೆದರೆ ಸುಖಶಾಂತಿಯು ಲಭಿಸುತ್ತದೆ. ಶುಭಕೃತ ನಾಮ ಸಂವತ್ಸರವೇ ಹೇಳುವಂತೆ ಶುಭವನ್ನು ಕಾಣಬಹುದು. ಯಾರನ್ನೂ ನಿಂದಿಸಿ, ಮನಸ್ಸನ್ನು ನೋಯಿಸಬೇಡಿ. ಇದೇ ನಿಮ್ಮ ಕುಲದೇವರ ಮಹಾಪೂಜೆ ಮಾಡಿದಂತೆ. ಕುಲದೇವರನ್ನು ಧ್ಯಾನ ಮಾಡಿ. ಲಲಿತಸಹಸ್ರನಾಮ ಜಪಿಸಿದರೆ ಉತ್ತಮ ಫಲ ನಿಮ್ಮದಾಗುವುದು.

Leave a Comment

Your email address will not be published. Required fields are marked *