ಸಮಗ್ರ ನ್ಯೂಸ್: ಹಿಜಾಬ್ ವಿವಾದದ ಬಳಿಕ ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರಸ್ಥರು ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡಿರುವ ಹಿನ್ನಲೆಯಲ್ಲಿ ಇದೀಗ ಬಹುತೇಕ ಜಾತ್ರೋತ್ಸವ ಸಂತೆ ಮಾರುಕಟ್ಟೆಯಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧಿಸಲಾಗುತ್ತಿದೆ. ಇದೀಗ ಈ ವ್ಯಾಪಾರ ನಿಷೇಧ ಸುಳ್ಯಕ್ಕೂ ಕಾಲಿರಿಸಿದ್ದು, ಇಲ್ಲಿನ ಜಯನಗರದ ಜಾತ್ರೋತ್ಸವದಲ್ಲಿ ಮುಸ್ಲಿಂಮರಿಗೆ ವ್ಯಾಪಾರ ನಿಷೇಧಿಸಿರುವ ಕುರಿತಾದ ಬ್ಯಾನರ್ ಅಳವಡಿಸಲಾಗಿದೆ.
ಜಯನಗರದ ಆದಿಮೊಗೇರ್ಕಳ ಕೊರಗಜ್ಜನ ಸನ್ನಿಧಾನದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರು ವ್ಯಾಪಾರ ನಡೆಸಬಾರದು ಎಂಬ ಬ್ಯಾನರ್ ಅಳವಡಿಸಲಾಗಿದೆ.