Ad Widget .

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ|

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು , ಇಂದು ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ .

Ad Widget . Ad Widget .

ಭಾನುವಾರ ಅಂದರೆ ಏಪ್ರಿಲ್ 03 , 2022 ರಂದು ಪ್ರತಿ ಲೀಟರ್ ಪೆಟ್ರೋಲ್ , ಡೀಸೆಲ್ ಬೆಲೆ ಲೀಟರ್ ಗೆ ತಲಾ 80 ಪೈಸೆ ಹೆಚ್ಚಳವಾಗಿದೆ . ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕ್ರಮವಾಗಿ ಪ್ರತಿ ಲೀಟರ್ಗೆ 80 ಪೈಸೆ ಏರಿಕೆಯಾಗಿದ್ದು , ಪೆಟ್ರೋಲ್ ಲೀಟರ್ ಗೆ 103.41 ರೂ . ಇದ್ದರೆ ಡೀಸೆಲ್ ಲೀಟರ್ ಗೆ 94.67 ರೂ ರೂ . ಗೆ ಮಾರಾಟವಾಗುತ್ತಿದೆ .

Ad Widget . Ad Widget .

ಮುಂಬೈನಲ್ಲಿ , ಪೆಟ್ರೋಲ್ 85 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 84 ಪೈಸೆ ಹೆಚ್ಚಳವಾಗಿದ್ದು , ಪ್ರತಿ ಲೀಟರ್ ಪೆಟ್ರೋಲ್ 118.41 ರೂ . ಇದ್ದರೆ ಡೀಸೆಲ್ ಬೆಲೆ ಲೀಟರ್ ಗೆ 102.64 ರೂ . ಇದೆ . ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 84 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108.14 ರೂ. ತಲುಪಿದೆ.

ಚೆನ್ನೈನಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 75 ಪೈಸೆ ಹೆಚ್ಚಳವಾಗಿದ್ದು, ಈ ಮೂಲಕ ಪೆಟ್ರೋಲ್ ಲೀ.ಗೆ 108.96 ರೂ ಮತ್ತು ಡೀಸೆಲ್ ಬೆಲೆ ಲೀ 99.04 ರೂ.ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ, ಪೆಟ್ರೋಲ್ ಬೆಲೆಯಲ್ಲಿ 84 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀ. ಪೆಟ್ರೋಲ್ ಬೆಲೆ 113.03 ರೂ .ಇದೆ ಮತ್ತು ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀ.ಡೀಸೆಲ್ 97.82 ರೂ .ಗೆ ಮಾರಾಟವಾಗಿದೆ.

Leave a Comment

Your email address will not be published. Required fields are marked *