ಸಮಗ್ರ ನ್ಯೂಸ್: ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ನಿವೃತ್ತ ಎಎಸ್ಐ ಎ. ಪೆರ್ಗಡೆ ಗೌಡ ಎಂಬವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದ ಬಳಿಯಲ್ಲಿ ನಡೆದಿದೆ.
ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಮಾರು ದೂರ ಅವರನ್ನು ಎಳೆದುಕೊಂಡು ಹೋಗಿದ್ದು, ತಲೆಗೆ ಗಾಯವಾಗಿದ್ದು ದೇಹದ ಹಲವು ಭಾಗಗಳಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.