Ad Widget .

ಪ್ರೇಯಸಿಯ ಬಂಧಮುಕ್ತಗೊಳಿಸಿ ವಿವಾಹವಾದ ಪ್ರಿಯಕರ| ಹಿಟ್ ಸಿನಿಮಾವನ್ನೇ ಮೀರಿಸುವ ಲವ್ ಸ್ಟೋರಿ|

ಸಮಗ್ರ ನ್ಯೂಸ್: ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿರುವ ಜೋಡಿಗೆ ಹುಡುಗಿಯ ಪೋಷಕರಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ಕೋರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ‌ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದ ಯುವಕ ಯೋಗನಾಂದ್, ಕಬ್ಳಿ ಪಕ್ಕದ ಜಿ ಕೊಪ್ಪಲು ಗ್ರಾಮದ ಯುವತಿ ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಈ ಸಂದರ್ಭದಲ್ಲಿ ಯೋಗಾನಂದ್, ಯುವತಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ ಎರಡು ವರ್ಷದ ಹಿಂದೆ ಯುವಕ ಯೋಗನಾಂದ್ ಪದವಿ ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಾಲೇಜಿನಲ್ಲಿ ಅಂತಿಮ ಬಿಕಾಂನಲ್ಲಿ ಯುವತಿ ಓದುತ್ತಿದ್ದಳು. ಆದರೆ ಇಬ್ಬರ ನಡುವಿನ ಪ್ರೀತಿ ಮಾಸಿರಲಿಲ್ಲ, ಆ ಪ್ರೇಮ ಮತ್ತಷ್ಟು ಗಟ್ಟಿಯಾಗಿದೆ.

Ad Widget . Ad Widget . Ad Widget .

ವಿಚಾರ ತಿಳಿದ ಹುಡುಗಿಯ ಮನೆಯವರು ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದರು. ಒತ್ತಾಯ ಪೂರ್ವಕವಾಗಿ ಮದುವೆ ಮಾಡಲು ರೇವತಿಳನ್ನು ನಿಗೂಢವಾದ ಸ್ಥಳದಲ್ಲಿ ಇಟ್ಟಿದ್ದ ವಿಚಾರವನ್ನು ಹೇಗೂ ಅರಿತ ಯುವ ಯೋಗಾನಂದ ಆ ಸ್ಥಳಕ್ಕೆ ಹೋಗಿ ಯುವತಿಯನ್ನು ಮನವೊಲಿಸಿ ಕರೆತಂದಿದ್ದಾನೆ.
ವಿರೋಧ ನಡುವೆಯೂ ಯೋಗನಾಂದ್ ದೇವಸ್ಥಾನದಲ್ಲಿ ರೇವತಿಯನ್ನ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದನು.

ಇವರಿಬ್ಬರು ಮದುವೆಯ ವಿಚಾರ ಕೇಳಿ ಸಹಜವಾಗಿಯೇ ಹುಡುಗಿ ಮನೆಯವರು ಜೋಡಿಯ ಹುಡುಕಾಟ ನಡೆಸಿದ್ದಾರೆ. ಜೊತೆಗೆ ವಧು-ವರರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟಿರೋ ಜೋಡಿ ಆರೋಪಿಸಿದ್ದಾರೆ. ಹೀಗಾಗಿ ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರಲ್ಲಿ ಮನವಿ ಮಾಡಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರೋ ಜೋಡಿ, ಸೂಕ್ತ ರಕ್ಷಣೆ ನೀಡುವಂತೆ ಕೋರಿಕೊಂಡಿದೆ.

ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದ್ವೆಯಾಗಿದ್ದೇವೆ ನಮಗೇನಾದ್ರೂ ಹೆಚ್ಚು ಕಡಿಮೆ ಆದ್ರೆ ನಮ್ಮ ಮಾವಂದಿರೇ ಕಾರಣ ಅಂತಾ ರೇವತಿ ಆರೋಪಿಸಿದ್ದಾರೆ.ಹೀಗಾಗಿ ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರಲ್ಲಿ ಮನವಿ ಮಾಡಿದ್ದಾರೆ. ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದ್ವೆಯಾಗಿದ್ದೇವೆ ನಮಗೇ ನಾದ್ರೂ ಹೆಚ್ಚು ಕಡಿಮೆ ಆದ್ರೆ ನಮ್ಮ ಮಾವಂದಿರೇ ಕಾರಣ ಅಂತ ದೂರಿದ್ದಾರೆ.

Leave a Comment

Your email address will not be published. Required fields are marked *