Ad Widget .

ಕಡಬ: ಪರ್ಸ್ ಎಗರಿಸಿದ ಬಾಲಕರು

ಸಮಗ್ರ ನ್ಯೂಸ್: ಅಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೋರ್ವರ ಪರ್ಸನ್ನು ಅಪ್ರಾಪ್ತ ಬಾಲಕರಿಬ್ಬರು ಎಗರಿಸಿ ಪರಾರಿಯಾಗಲು ಯತ್ನಿಸಿದ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ಅವರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

Ad Widget . Ad Widget .

ಪರ್ಸ್ ಎಗರಿಸಿದ ಅಪ್ತಾಪ್ತ ಬಾಲಕರು ಕುಂತೂರು ಸಮೀಪದವರೆಂದು ತಿಳಿದು ಬಂದಿದ್ದು, ಈ ಬಾಲಕರು ಕಡಬ ಸಮೀಪದ ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಬಂದಿದ್ದು ಅವರು ತಮ್ಮ ಸ್ನೇಹಿತರೋರ್ವರ ಜತೆ ಮಾತನಾಡುತ್ತಿದ್ದಾಗ ಆ ವ್ಯಕ್ತಿಯ ಪರ್ಸನ್ನು ಈ ಬಾಲಕರು ಎಗರಿಸಿ ಪರಾರಿಯಾಗಿದ್ದಾರೆ. ಕೂಡಲೇ ಬಾಲಕರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೋಲಿಸರ ವಶಕ್ಕೆ ಕೊಡಲಾಯಿತು. ವಶಕ್ಕೆ ಪಡೆದ ಪೊಲೀಸರು ಬಾಲಕರನ್ನು ವಿಚಾರಿಸಿ ಬಳಿಕ ಅವರನ್ನು ಅವರ ಪೋಷಕರ ಜತೆ ಕಳುಹಿಸಿಕೊಟ್ಟಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *