March 2022

ಮತ್ತೆ ಏರಿಕೆಯ ಹಾದಿಯಲ್ಲಿ ತೈಲಬೆಲೆ| ದಿನ ಬಿಟ್ಟು ದಿನ 80 ಪೈಸೆ ಹೆಚ್ಚಳ|

ಸಮಗ್ರ ನ್ಯೂಸ್: 137 ದಿನಗಳ ನಂತರ ಎರಡು ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಮೊದಲ ದಿನ 80 ಪೈಸೆ ಮತ್ತು ಎರಡನೇ ದಿನ 80 ಪೈಸೆಯಷ್ಟು ಏರಿಕೆ ಕಂಡಿದ್ದ ತೈಲ ದರ ಮೂರನೇ ದಿನ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 97.81 ರೂ., ಡೀಸೆಲ್ 89.07 ರೂ., ಇದೆ. ಮುಂಬೈನಲ್ಲಿ ಪೆಟ್ರೋಲ್ […]

ಮತ್ತೆ ಏರಿಕೆಯ ಹಾದಿಯಲ್ಲಿ ತೈಲಬೆಲೆ| ದಿನ ಬಿಟ್ಟು ದಿನ 80 ಪೈಸೆ ಹೆಚ್ಚಳ| Read More »

ರಾಜ್ಯದಲ್ಲಿ ಮುಂದುವರಿದ ವ್ಯಾಪಾರ ಧರ್ಮಯುದ್ಧ| ಅನ್ಯಧರ್ಮೀಯರ ಜೊತೆ ವ್ಯವಹರಿಸದಿರಲು ಹಿಂದೂ ಸಂಘಟನೆಗಳಿಂದ ಚಿಂತನೆ| ‘ಹಲಾಲ್’ ವಸ್ತುಗಳ ಖರೀದಿಗೂ ಬ್ರೇಕ್

ಸಮಗ್ರ ನ್ಯೂಸ್: ಮುಸ್ಲಿಂ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಪರ ಸಂಘಟನೆಗಳು ಚಿಂತನೆ ನಡೆಸಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಅಂಗಡಿಯಲ್ಲಿ ಖರೀದಿ ನಿಷೇಧ ಹೇರಲಾಗಿದ್ದು, ಜಾತ್ರೆ, ಮಹೋತ್ಸವ ಇತರೆ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧಿಸಲಾಗಿದೆ. ಕರಾವಳಿಯ ಹಲವು ಪ್ರಮುಖ ಜಾತ್ರಾ ಮಹೋತ್ಸವಗಳಲ್ಲಿ ಮುಸಲ್ಮಾನರ ಅಂಗಡಿ, ಮಳಿಗೆಗಳಿಗೆ ನಿಷೇಧ ಹೇರಲಾಗಿದ್ದು, ಧರ್ಮಯುದ್ಧ ವ್ಯಾಪಾರಕ್ಕೂ ‌ಯುದ್ಧವಾಗಿ ಪರಿವರ್ತನೆಗೊಂಡಿದೆ. ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಖರೀದಿ ಮಾಡಬಾರದು ಅಂತ ಹಿಂದೂ ಪರ ಸಂಘಟನೆಗಳು ಕರೆ

ರಾಜ್ಯದಲ್ಲಿ ಮುಂದುವರಿದ ವ್ಯಾಪಾರ ಧರ್ಮಯುದ್ಧ| ಅನ್ಯಧರ್ಮೀಯರ ಜೊತೆ ವ್ಯವಹರಿಸದಿರಲು ಹಿಂದೂ ಸಂಘಟನೆಗಳಿಂದ ಚಿಂತನೆ| ‘ಹಲಾಲ್’ ವಸ್ತುಗಳ ಖರೀದಿಗೂ ಬ್ರೇಕ್ Read More »

ವಾಯುಭಾರ ಕುಸಿತ | ಮತ್ತೆ 4ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ|

ಸಮಗ್ರ ನ್ಯೂಸ್: ವಾಯುಭಾರ ಕುಸಿತ ಹಿನ್ನಲೆ ರಾಜ್ಯದ ಹಲವಡೆ ಮುಂದಿನ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ ಮಧ್ಯ ಕರಾವಳಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆ ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. 24 ರಿಂದ 28 ರವರೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು

ವಾಯುಭಾರ ಕುಸಿತ | ಮತ್ತೆ 4ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ| Read More »

ಕೂದಲೆಳೆಯಲ್ಲಿ ಸಾವಿನ ಬಾಯಿಂದ ಪಾರಾದ ಬಾಲಕ| ಮೈ ಜುಂ ಅನಿಸುತ್ತೆ ಈ ದೃಶ್ಯ|

ಸಮಗ್ರ ನ್ಯೂಸ್: ಬಾಲಕನೋರ್ವ ಸೈಕಲ್ ತುಳಿದುಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಪ್ರವೇಶಿಸಿ, ಕೂದಲೆಳೆ ಅಂತರದಲ್ಲಿ ಬಸ್ಸಿನಡಿಗೆ ಬೀಳುವುದು ತಪ್ಪಿ‌ ಸಾವಿನ ಬಾಯಿಂದ ಪಾರಾದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಬಾಲಕ ಮೃತ್ಯುವಿನ ಕೂಪದಿಂದ ಬಚಾವಾಗಿದ್ದಾನೆ. ಮುಖ್ಯ ರಸ್ತೆಗೆ ಪ್ರವೇಶಿಸಿದ ಬಾಲಕ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಅತಿವೇಗದಲ್ಲಿ ಕೇರಳ ಸಾರಿಗೆ ಬಸ್ಸು ಬಂದಿದ್ದು, ಬಾಲಕನ ಸೈಕಲ್ ಮೇಲೆ ಚಲಿಸಿದೆ. ಆದರೆ ಅದೃಷ್ಟವಶಾತ್

ಕೂದಲೆಳೆಯಲ್ಲಿ ಸಾವಿನ ಬಾಯಿಂದ ಪಾರಾದ ಬಾಲಕ| ಮೈ ಜುಂ ಅನಿಸುತ್ತೆ ಈ ದೃಶ್ಯ| Read More »

ಮುಸ್ಲಿಮರ ಭಾವನೆಗ ಧಕ್ಕೆ ಆರೋಪ| ಪತ್ರಕರ್ತ ಹೆಚ್.ಆರ್ ರಂಗನಾಥ್, ಅರುಣ್ ಬಡಿಗೇರ್ ಗೆ ಸಂಕಷ್ಟ|

ಸಮಗ್ರ‌ ನ್ಯೂಸ್: ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ. 2022ರ ಫೆಬ್ರವರಿ 3ರಂದು ಪಬ್ಲಿಕ್ ಟಿವಿ ಯಲ್ಲಿ ” ವಿದ್ಯಾದೇಗುಲದಲ್ಲಿ ಧರ್ಮ ಯುದ್ದ” “ಬಿಗ್ ಬುಲೆಟಿನ್” ಎಂಬ ಹೆಸರಿನ ಕಾರ್ಯಕ್ರಮ ಪ್ರಸಾರವಾಗಿತ್ತು. ವಾಹಿನಿಯ ಮುಖ್ಯಸ್ಥ ಎಚ್ ಆರ್. ರಂಗನಾಥ ಮತ್ತು ನಿರೂಪಕ ಅರುಣ್ ಬಡಿಗರ್ ಮಾತನಾಡುತ್ತಾ ” ಇದು ಭಾರತ. ಭಾರತ

ಮುಸ್ಲಿಮರ ಭಾವನೆಗ ಧಕ್ಕೆ ಆರೋಪ| ಪತ್ರಕರ್ತ ಹೆಚ್.ಆರ್ ರಂಗನಾಥ್, ಅರುಣ್ ಬಡಿಗೇರ್ ಗೆ ಸಂಕಷ್ಟ| Read More »

ಹಿಜಾಬ್ ತೀರ್ಪು: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಪರೀಕ್ಷೆಗೆ ಗೈರು

ಸಮಗ್ರ ನ್ಯೂಸ್.ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಇದೀಗ ಪದವಿ ಪರೀಕ್ಷೆಗೆ ಗೈರಾಗಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಹಿಜಾಬ್‌ ತೀರ್ಪು ವಿರೋಧಿಸಿದ್ದಾಳೆ. ಕಾಲೇಜಿನಲ್ಲಿ ಹಿಜಾಬ್ ಅವಕಾಶ ಕೊಡದಕ್ಕೆ ಕಾಲೇಜಿಗೆ ಕಳುಹಿಸಲ್ಲ ಮುಸ್ಕಾನ್ ತಂದೆ ಎಂದು ಹೇಳಿದ್ದಾರೆ. ಅಲ್ಲದೇ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆಯು

ಹಿಜಾಬ್ ತೀರ್ಪು: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಪರೀಕ್ಷೆಗೆ ಗೈರು Read More »

ಹರ್ಷ ಕೊಲೆ ಪ್ರಕರಣ| ತನಿಖೆ ಎನ್ಐಎ ಗೆ ವಹಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ|

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಕೆಲ ದಿನಗಳ ಹಿಂದೆ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಎನ್‌ಐಎ ತನಿಖೆಗೆ ವಹಿಸಬೇಕು ಎಂಬುದಾಗಿ ಆಡಳಿತ, ಪ್ರತಿಪಕ್ಷದ ನಾಯಕರು ಒತ್ತಾಯಿಸಿದ್ದರು. ಈ ಬಳಿಕ, ಇದೀಗ ರಾಜ್ಯ ಸರ್ಕಾರ ಹರ್ಷ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.‌ ಈ ಸಂಬಂಧ ರಾಜ್ಯ ಗೃಹ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ನಡೆಸುವಂತೆ ಆದೇಶಿಸಿದೆ.

ಹರ್ಷ ಕೊಲೆ ಪ್ರಕರಣ| ತನಿಖೆ ಎನ್ಐಎ ಗೆ ವಹಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ| Read More »

ಮತ್ತೊಂದು ಭೀಕರ ಅಪಘಾತ| ಖಾಸಗಿ ಬಸ್ ಗೆ ಬೈಕ್ ಡಿಕ್ಕಿ| ಒಂದೇ ಕುಟುಂಬದ ನಾಲ್ವರು ದುರ್ಮರಣ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ನಡೆದಿದೆ. ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ಒಂದೇ ಕುಟುಂಬದ ನಾಲ್ವರು ತೆರಳುತ್ತಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೃತರನ್ನು ಬಿ.ದುರ್ಗಾ ಗ್ರಾಮದ ನಾಗರಾಜ್ (45), ಪತ್ನಿ ಶೈಲಜಾ (38) ಪುತ್ರರಾದ ವೀರೇಶ್ (15)

ಮತ್ತೊಂದು ಭೀಕರ ಅಪಘಾತ| ಖಾಸಗಿ ಬಸ್ ಗೆ ಬೈಕ್ ಡಿಕ್ಕಿ| ಒಂದೇ ಕುಟುಂಬದ ನಾಲ್ವರು ದುರ್ಮರಣ Read More »

ಹರ್ಷ ಹತ್ಯೆ ಪರಿಣಾಮ| ಪುತ್ತೂರು ಜಾತ್ರೆಯಲ್ಲೂ ಅನ್ಯಧರ್ಮೀಯರಿಗೆ ಮಳಿಗೆ ತೆರೆಯಲು ನಿರ್ಬಂಧ| ಆಡಳಿತ ಮಂಡಳಿಯಿಂದ ಪ್ರಕಟಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ಹಿಂದೂಯೇತರ ಸಮುದಾಯಕ್ಕೆ ತಾತ್ಕಾಲಿಕ ಮಳಿಗೆಗಳ ಹರಾಜನ್ನು ನಿರ್ಬಂಧಿಸಿದೆ. ಏಪ್ರಿಲ್ 10ರಿಂದ 25 ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಹಿಂದೂಗಳು ಮಾತ್ರ ತಮ್ಮ ಅಂಗಡಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಈ ವೇಳೆ ನೂರಾರು ಜಾತ್ರಾ ಮಳಿಗೆಗಳು ದೇವಸ್ಥಾನದ ಬಾಕಿ ಮಾರುಗದ್ದೆಯಲ್ಲಿ ಇರಲಿದೆ. ಈ ಜಾತ್ರಾ ಮಳಿಗೆಗಳಲ್ಲೂ ಹಿಂದೂಯೇತರರು ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ. ದೇವಾಲಯದ

ಹರ್ಷ ಹತ್ಯೆ ಪರಿಣಾಮ| ಪುತ್ತೂರು ಜಾತ್ರೆಯಲ್ಲೂ ಅನ್ಯಧರ್ಮೀಯರಿಗೆ ಮಳಿಗೆ ತೆರೆಯಲು ನಿರ್ಬಂಧ| ಆಡಳಿತ ಮಂಡಳಿಯಿಂದ ಪ್ರಕಟಣೆ Read More »

ವಾಯುಭಾರ ಕುಸಿತ: ಇಂದು ಭಾರೀ ಮಳೆ ನಿರೀಕ್ಷೆ; ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಅಂಡಮಾನ್‌ ನಿಕೋಬಾರ್ ನಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದ್ದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮುಂತಾದ ಹಲವು ಪ್ರದೇಶಗಳಲ್ಲಿ ಇಂದು ಮಳೆಯಾಗುವ ನಿರೀಕ್ಷೆ ಇದೆ. ಮೂರು ದಿನಗಳಿಂದ ಬೆಂಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು, ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಈ ಜಿಲ್ಲೆಗಳಲ್ಲಿ ಇಂದು ಕೂಡ ಹಳದಿ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಇಂದು ದಕ್ಷಿಣ ಒಳಭಾಗ ಮತ್ತು ಕರಾವಳಿಯಾದ್ಯಂತ ಮಳೆಯಿಂದ ಹಳದಿ ಅಲರ್ಟ್​ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ

ವಾಯುಭಾರ ಕುಸಿತ: ಇಂದು ಭಾರೀ ಮಳೆ ನಿರೀಕ್ಷೆ; ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ Read More »